ಜಿಲ್ಲೆ

ಅ.21 ಹಾಗೂ 22 ರಂದು ಡಿಸಿಇಟಿ, ಪಿಜಿಸಿಇಟಿ ಪರೀಕ್ಷೆಗಳಿಗೆ ತರಬೇತಿ

ಮೈಸೂರು: ತಾಂಡವಪುರದ ಮಹಾರಾಜ ತಾಂತ್ರಿಕ ಮಹಾ ವಿದ್ಯಾಲಯದಿಂದ ಅ.21 ಮತ್ತು 22ರಂದು ಡಿಸಿಇಟಿ ಹಾಗೂ ಪಿಜಿಸಿಇಟಿ ಪರೀಕ್ಷೆಗಳಿಗೆ ತರಬೇತಿ ಆಯೋಜಿಸಲಾಗಿದೆ.
ಸಂಸ್ಥೆ ಎರಡನೇ, ಮೂರನೇ ವರ್ಷದ ಸೆಮಿಸ್ಟರ್ ಲ್ಯಾಟರಲ್ ಎಂಜಿನಿಯರಿಂಗ್ ಪ್ರವೇಶಕ್ಕೆ ನೆರವಾಗುವಂತೆ ಈ ಕಾರ್ಯಾಗಾರ ಆಯೋಜಿಸಿದೆ. ಉಚಿತವಾಗಿ ಅಧ್ಯಯನ ಸಾಮಗ್ರಿ ನೀಡಲಾಗುವುದು. ನೂರು ರೂ. ನೋಂದಣಿ ಶುಲ್ಕ ಇರಲಿದೆ ಎಂದು ಕಾಲೇಜಿನ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ.ಎಂ.ಜಿ. ಶ್ರೀನಿವಾಸ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೈಸೂರು, ನಂಜನಗೂಡು, ಚಾಮರಾಜನಗರ, ಮಳವಳ್ಳಿ, ಬನ್ನೂರು, ಪಾಂಡವಪುರ, ಶ್ರೀರಂಗಪಟ್ಟಣ, ಗುಂಡ್ಲುಪೇಟೆ, ಎಚ್.ಡಿ.ಕೋಟೆ ಮತ್ತು ಸರಗೂರಿನಿಂದ ಉಚಿತ ಬಸ್ ಸೌಕರ್ಯ ಕಲ್ಪಿಸಲಾಗುತ್ತದೆ. ಆಸಕ್ತರು ಮಾಹಿತಿಗಾಗಿ ಮೊಬೈಲ್ 96202 28002 ಮೂಲಕ ಪ್ರಾಂಶುಪಾಲರನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಮಹಾವಿದ್ಯಾಲಯದ ಪ್ರೊ.ಸಾಯಿದತ್ ಇದ್ದರು.