ಜಿಲ್ಲೆ

ಅ. 20 ರಂದು ವಿದ್ಯುತ್ ವ್ಯತ್ಯಯ

ಎಸ್.ಎರ್ರಿಸ್ವಾಮಿ

ಬಳ್ಳಾರಿ : ಇಲ್ಲಿ ದಕ್ಷಿಣ ಉಪ-ಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಬಮಾಸಿಕ ನಿರ್ವಹಣೆ ಕಾರ್ಯವನ್ನು ತುರ್ತಾಗಿ ಕೈಗೊಳ್ಳುತ್ತಿರುವುದರಿಂದ ಅ. 20 ರಂದು ಬೆಳಗ್ಗೆ 9.30 ಗಂಟೆಯಿಂದ ಮಧ್ಯಾಹ್ನ 03.30 ಗಂಟೆಯವರೆಗೆ 11ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.ವಿದ್ಯುತ್‌ವ್ಯತ್ಯಯ ಪ್ರದೇಶಗಳು : ಟಪಾಲ್ ಸ್ಟೀಲ್, ಸಿದ್ದಾಪುರ ರಸ್ತೆ, ಗುಗ್ಗರಹಟ್ಟಿ ಗ್ರಾಮ, ಮುಂಡರಗಿ, ಬೈಪಾಸ್ ರಸ್ತೆ, ಅಂದ್ರಾಳ್, ಪಾತ್ರ ಬೂದಿಹಾಳ್, ಮಂಗಮ್ಮ ಕ್ಯಾಂಪ್, ಮಿಂಚೇರಿ ಗ್ರಾಮ, ಎಸ್. ಜೆ. ಕೋಟೆ ಗ್ರಾಮ, ಮುಂಡರಿಗಿ ಗ್ರಾಮ, ಚರಕುಂಟೆ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ತಿಳಿಸಿದ್ದಾರೆ.