ಬಸವಕಲ್ಯಾಣದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರವಚನ ಪಿತಾಮಹ ಲಿಂ.ಶ್ರೀ ಲಿಂಗಾನಂದ ಮಹಾಸ್ವಾಮೀಜಿ ಜಯಂತಿ, ಪೂಜ್ಯ ಡಾ.ಗಂಗಾದೇವಿ ಮಾತಾಜಿ ಜನ್ಮದಿನ ಹಾಗೂ 23ನೇ ಕಲ್ಯಾಣ ಪರ್ವದ ಪೂರ್ವಭಾವಿ ಸಭೆಯನ್ನು ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಉದ್ಘಾಟಿಸಿದರು. ಜಗದ್ಗುರು ಪೂಜ್ಯ ಡಾ.ಗಂಗಾದೇವಿ ಮಾತಾಜಿ, ಅನೀಲಕುಮಾರ ಪಾಟೀಲ್, ಶಿವರಾಜ ನರಶೆಟ್ಟಿ, ರವೀಂದ್ರ ಕೊಳಕೂರ, ಆರ್.ಜಿ.ಶೆಟಗಾರ ಇದ್ದರು. 
ಜಿಲ್ಲೆ

ಅ.18ರಿಂದ ಮೂರು ದಿನ 23ನೇ ಕಲ್ಯಾಣ ಪರ್ವ

ಬಸವಕಲ್ಯಾಣ: ಬಸವ ಮಹಾಮನೆಯಲ್ಲಿ ಶನಿವಾರ ಪ್ರವಚನ ಪಿತಾಮಹ ಲಿಂ. ಶ್ರೀ ಲಿಂಗಾನಂದ ಮಹಾಸ್ವಾಮೀಜಿ ಜಯಂತಿ, ರಾಷ್ಟ್ರೀಯ ಬಸವದಳ ಹಾಗೂ ಪೂಜ್ಯ ಡಾ.ಗಂಗಾದೇವಿ ಮಾತಾಜಿ ಜನ್ಮದಿನ ಹಾಗೂ 23ನೇ ಕಲ್ಯಾಣ ಪರ್ವದ ಪೂರ್ವಭಾವಿ ಸಭೆ ಜರುಗಿತು. ಅ.18ರಿಂದ ಮೂರು ದಿನ 23ನೇ ಕಲ್ಯಾಣ ಪರ್ವ ಅದ್ದೂರಿ ಜತೆಗೆ ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ತೀರ್ಮಾನಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಮಹಾಜಗದ್ಗುರು ಪೂಜ್ಯ ಡಾ.ಗಂಗಾದೇವಿ ಮಾತಾಜಿ ಮಾತನಾಡಿ, ಕಲ್ಯಾಣ ಪರ್ವ ಯಶಸ್ಸಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಕೋರಿದರು.

ಶ್ರೀ ಸಿದ್ದರಾಮೇಶ್ವರ ಮಹಾಸ್ವಾಮೀಜಿ, ಹುಲಸೂರಿನ ಶ್ರೀ ಡಾ..ಶಿವಾನಂದ ಮಹಾಸ್ವಾಮೀಜಿ, ಪೂಜ್ಯ ಡಾ.ಗಂಗಾಂಬಿಕಾ ಅಕ್ಕ ಸಮ್ಮುಖ ವಹಿಸಿದ್ದರು. ಉಪನ್ಯಾಸಕ ಶಂಭುಲಿಂಗ ಕಾಮಣ್ಣ, ಬೀದರ್‍ನ ಸೋಮಶೇಖರ ಪಾಟೀಲ್, ರಾಜೇಂದ್ರ ಗಂದಗೆ, ಸುರೇಶ ಸ್ವಾಮಿ, ರವೀಂದ್ರ ಕೊಳಕೂರ, ಶಂಕ್ರೆಪ್ಪ ಪಾಟೀಲ್ ಜಹೀರಾಬಾದ್, ರವಿ ಪಾಪಡ, ಜಯಶ್ರೀ ಪಾಟೀಲ್, ರಾಜೇಶ್ವರಿ ಖೂಬಾ, ಲಕ್ಷ್ಮೀಕಾಂತ ಜಾಂತೆ, ಬಸವರಾಜ ಪಾಟೀಲ್ ಉಪಸ್ಥಿತರಿದ್ದರು.

ಕಲ್ಯಾಣ ಪರ್ವದ ಸ್ವಾಗತ ಸಮಿತಿಗೆ ಅನೀಲಕುಮಾರ ಪಾಟೀಲ್ ಹೈದರಾಬಾದ್ (ಅಧ್ಯಕ್ಷ), ವಿವೇಕ ಧನ್ನೂರ (ಕೋಶಾಧ್ಯಕ್ಷ), ಮೆರವಣಿಗೆ ಸಮಿತಿಗೆ ರವೀಂದ್ರ ಕೊಳಕೂರ (ಅಧ್ಯಕ್ಷ), ರಾಜೇಂದ್ರ ಗಂದಗೆ (ಕಾರ್ಯದರ್ಶಿ), ಲಕ್ಷ್ಮೀಕಾಂತ ಜಾಂತೆ (ಸಹ ಕಾರ್ಯದರ್ಶಿ), ಪ್ರಚಾರ ಸಮಿತಿಗೆ ಆರ್.ಜಿ. ಶೆಟಗಾರ (ಅಧ್ಯಕ್ಷ), ಪದಾಧಿಕಾರಿಗಳಾಗಿ ಸಿದ್ದು ಶೆಟಗಾರ, ವಿಜಯಕಮಾರ ಮೇಳಕುಂದೆ, ವಿಜಯಕುಮಾರ ಪಟ್ನೆ, ದಾಸೋಹ ಸಮಿತಿಗೆ ಸೋಮಶೇಖರ ಪಾಟೀಲ್ (ಅಧ್ಯಕ್ಷ), ಶಂಕ್ರೆಪ್ಪ ಪಾಟೀಲ್ (ಕಾರ್ಯದರ್ಶಿ) ಅವರನ್ನು ಆಯ್ಕೆ ಮಾಡಲಾಯಿತು.