ಜಿಲ್ಲೆ

ಬೆಳಗಾವಿ ಜಿಪಂಗೆ ' ಅಮೃತ ಸರೋವರ ಪುರಸ್ಕಾರ' ಪ್ರಶಸ್ತಿ

ಮಂಜುನಾಥ ಕೋಳಿಗುಡ್ಡ

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅಭಿನಂದನೆ.

ಬೆಳಗಾವಿ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ( ನರೇಗಾ) ಅಡಿ ವಿವಿಧ ಕಾಮಗಾರಿಗಳ ಅನುಷ್ಠಾನದಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿರುವ ಬೆಳಗಾವಿ ಜಿಲ್ಲಾ ಪಂಚಾಯತಿ ಇದೀಗ 'ಅಮೃತ ಸರೋವರ ಜಿಲ್ಲಾ ಪುರಸ್ಕಾರ' ಕ್ಕೆ ಪಾತ್ರವಾಗಿದೆ.

2023-24 ನೇ ಸಾಲಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಿಸಿದಕ್ಕಾಗಿ, ನರೇಗಾ ಪ್ರಶಸ್ತಿಗೆ ಜಿಲ್ಲಾ ಪಂಚಾಯ ಹಾಗೂ ಗ್ರಾಮ ಪಂಚಾಯತಿ ಪುರಸ್ಕಾರಕ್ಕೆ ಆಯ್ಕೆಯಾಗಿದೆ.

ಅತ್ಯುತ್ತಮ ಜಿಲ್ಲಾ ಒಗ್ಗೂಡಿಸುವಿಕೆ ಪುರಸ್ಕಾರ - ಅರಣ್ಯ ಹಾಗೂ ಕೃಷಿ ಮತ್ತು ಜಲಾನಯನ ಇಲಾಖೆ, ಅತ್ಯುತ್ತಮ ಗ್ರಾಮ ಪಂಚಾಯತಿ ಪುರಸ್ಕಾರ ಹುಕ್ಕೇರಿ ತಾಲೂಕಿನ ಕೊಟಬಾಗಿ ಗ್ರಾಮ ಪಂಚಾಯತಿ ಪಾತ್ರವಾಗಿದೆ.

ಜಿಪಂನ ಹಿಂದಿನ ಸಿಇಒ ಎಚ್.ವಿ.ದರ್ಶನ ತಮ್ಮ ಅವಧಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಮೊದಲ ಬಾರಿಗೆ ಅಮೃತ ಸರೋವರ ಕಾಮಗಾರಿ ಆರಂಭಿಸಿದ್ದರು. ತದನಂತರ ಬಂದ ಸಿಇಒ ಹರ್ಷಲ್ ಬೋಯರ್ ಅವರು ಕಾಮಗಾರಿಗಳ ವೇಗ ಹೆಚ್ಚಿಸಿದರು. ಈಗಿನ ಸಿಇಒ ರಾಹುಲ ಶಿಂಧೆ ಅವರು ಅಮೃತ ಸರೋವರ ಕಾಮಗಾರಿ ಪೂರ್ಣಗೊಳಿಸುವಲ್ಲಿ ಯಶಸ್ವಿಯಾದರು. ಇದೀಗ ಸರ್ಕಾರವು ಪುರಸ್ಕಾರ ‌ನೀಡಿ ಗೌರವಿಸಿದೆ.

ಬೆಂಗಳೂರಿನ ವಸಂತ ನಗರದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಮೆಮೋರಿಯಲ್ ಟ್ರಸ್ಟ್. ಅಂಬೇಡ್ಕರ್ ಭವನ ಫೆ.5ರಂದು ಬೆಳಗ್ಗೆ 11 ಗಂಟೆಗೆ ಜರುಗಲಿರುವ ಕಾರ್ಯಕ್ರಮವನ್ನು ‌ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ‌ ಪ್ರಿಯಾಂಕ ಖರ್ಗೆ ಪ್ರದಾನ ಮಾಡಲಿದ್ದಾರೆ.