ಜಿಲ್ಲೆ

Retirement: 35 ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಅಣ್ವೇಕರ್‌ ಅವರಿಗೆ ಸನ್ಮಾನ, ಬೀಳ್ಕೊಡುಗೆ

Uttara Kannada - Subash Hegde

ಕಾರವಾರ Retirement:  ಸರಳ, ಸಜ್ಜನ ಹಾಗೂ ಶಿಸ್ತಿನ ವ್ಯಕ್ತಿತ್ವದ ವಿನೋದ ಅಣ್ವೇಕರ್ ಅವರು ಉತ್ತರ ಕನ್ನಡ ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲೆಗೆ ನೀಡಿದ ಸೇವೆ ಅನನ್ಯವಾಗಿದೆ ಎಂದು ಜಿಪಂ ಸಿಇಒ ಈಶ್ವರ ಕುಮಾರ ಕಾಂದೂ ಶ್ಲಾಘಿಸಿದರು.

ಸೇವಾ ನಿವೃತ್ತಿ ಹೊಂದಿದ ಮುಖ್ಯ ಯೋಜನಾಧಿಕಾರಿ ವಿನೋದ ಅಣ್ವೇಕರ್ ಅವರನ್ನು ಮಂಗಳವಾರ ಜಿಪಂ ಸಭಾಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಸನ್ಮಾನಿಸಿ, ಬೀಳ್ಕೊಟ್ಟು ಅವರು ಮಾತನಾಡಿದರು.

ಸುದೀರ್ಘ ಅವಧಿಗೆ ನಿಷ್ಠೆಯಿಂದ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅವರು ಸಾಕಷ್ಟು ಅನುಭವಗಳನ್ನು ಹೊಂದಿದ್ದಾರೆ. ಇನ್ನೂ ಅವರ ಸಲಹೆ ಜಿಪಂಗೆ ಬೇಕಿದೆ ಎಂದರು. ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ಹಾಲಮ್ಮನವರ್ ಅವರು ಮಾತನಾಡಿ, ವಿನೋದ ಅಣ್ವೇಕರ್ ಕಷ್ಟದ ಕೆಲಸವನ್ನು, ಇಷ್ಟಪಟ್ಟು ಮಾಡುತ್ತಿದ್ದರು. ಸರಳತೆ, ಸೂಕ್ಷ್ಮತೆ ಎಲ್ಲ ಗುಣಗಳೂ ಅವರಲ್ಲಿದ್ದವು ಎಂದರು.

ವಿನೋದ ಅಣ್ವೇಕರ್‌‌ Retirement

ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್ ಮಾತನಾಡಿ, ತಮ್ಮನ್ನು ತಾವು ಹುರಿದುಂಬಿಸಿಕೊಂಡು ಬೇರೆಯವರನ್ನು ಪ್ರೇರೇಪಿಸುವರು. ವಿನೋದ ಅಣ್ವೇಕರ್ ಅವರು ಮಿಸ್ಟರ್ ಪರ್ಫೆಕ್ಟ್. ಆದರೆ, ಸರಳ ವ್ಯಕ್ತಿತ್ವದವರು ಎಂದರು. ಸಾಮಾಜಿಕ ಅರಣ್ಯ ವಿಭಾಗದ ಡಿಎಫ್‌ಒ, ಮಂಜುನಾಥ ನಾವಿ ಮಾತನಾಡಿ,ವಿನೋದ ಅಣ್ವೇಕರ್ ಅವರಲ್ಲಿ ಅಧಿಕಾರದ ಅಹಂ ಇರಲಿಲ್ಲ ಎಂದರು.

ಜಿಪಂ ಅಧಿಕಾರಿ ಕೃಷ್ಣ ಶಾಸ್ತ್ರಿ ಅವರು ಮಾತನಾಡಿ, ವಿನೋದ ಅಣ್ವೇಕರ್ ಸರಳ, ಸಜ್ಜನ ನಿಷ್ಟಾವಂತ ಅಧಿಕಾರಿ. ಅವರಿಗೆ ತಾನು ದೊಡ್ಡ ಅಧಿಕಾರಿ ಎಂಬ ಗರ್ವ ಇರಲಿಲ್ಲ. ಕೆಲಸದಲ್ಲಿ ಮಾತ್ರ ನಿಷ್ಠುರವಾಗಿದ್ದರು ಎಂದರು. ಜಿಲ್ಲಾ ಸಾಂಖ್ಯಿಕ ಅಧಿಕಾರಿ, ಸೋಮಶೇಖರ ಮೇಸ್ತ, ಉಪ ಕಾರ್ಯದರ್ಶಿ ನಾಗೇಶ ರಾಯ್ಕರ್ ಇನ್ನೂ ಹಲವರು ಮಾತನಾಡಿದರು. ಸೂರ್ಯನಾರಾಯಣ ಭಟ್  Retirement ಕಾರ್ಯಕ್ರಮ ನಿರೂಪಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಸಿಪಿಒ ವಿನೋದ ಅಣ್ವೇಕರ್, ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯ ಸಹಾಯಕ ಸಾಂಖ್ಯಿಕ ಅಧಿಕಾರಿಯಾಗಿ 35 ವರ್ಷಗಳ ಹಿಂದೆ ನೇಮಕವಾಗಿ ಬಂದಾಗ ನನಗೆ ದೊಡ್ಡ ಜವಾಬ್ದಾರಿ ನೀಡಿದ್ದರು. ಕೆಲಸ ಬಾರದೇ ನಾನು ಒದ್ದಾಡಿದ್ದೆ. ಈ ಉದ್ಯೋಗವನ್ನೇ ಬಿಟ್ಟು ಹೋಗಬೇಕು ಎಂದುಕೊಂಡಿದ್ದೆ. ಆದರೆ, ಛಲ ಬಿಡದೇ ಕೆಲಸ ಕಲಿತೆ. ಹೊಸ ಸವಾಲುಗಳನ್ನು ಸ್ವೀಕರಿಸಿದೆ. ಬೆಳಗಾವಿಯಂಥ ದೊಡ್ಡ ಜಿಲ್ಲೆಯ ಜಿಪಂ ಯೋಜನಾ ವಿಭಾಗದಲ್ಲಿ ಕೆಲಸ ಮಾಡಿದೆ. ಕೋವಿಡ್‌ನಂಥ ಅವಽಯಲ್ಲಿಯೂ ಎದೆಗುಂದದೇ ಕಾರ್ಯ ನಿರ್ವಹಿಸಿದೆ. ಪ್ರಾಮಾಣಿಕವಾಗಿ ಸೇವೆ ಮಾಡಿದ ಆತ್ಮ ಸಂತೃಪ್ತಿ ಇದೆ ಎಂದರು.