ಚಿತ್ರದುರ್ಗ: ಮೊದಲ ಹಾಗೂ 2ನೇ ಹಂತದ ಜಲಜೀವನ್ ಮಿಷನ್ ಹಾಗೂ ಬಹುಗ್ರಾಮ ಕುಡಿಯುವ ನೀರು ಸರಬರಾಜು ಕಾಮ ಗಾರಿಗಳನ್ನು ಡಿಸೆಂಬರ್ ಅಂತ್ಯದ ಒಳಗೆ ಪೂರ್ಣಗೊಳಿಸಬೇಕೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಇಲಾಖೆ ಅಪರ ಮುಖ್ಯ ಕಾರ‌್ಯದರ್ಶಿ ಎಲ್.ಕೆ.ಅತೀಕ್ ಅಧಿಕಾರಿಗಳಿಗೆ ಸೂಚಿಸಿದರು.
ಜಿ.ಪಂ.ದಲ್ಲಿ ಸೋಮವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ,3ನೇ ಹಂತದ ಕಾಮಗಾರಿಗಳನ್ನು ಮಾರ್ಚ್-2023 ಹಾಗೂ 4ನೇ ಹಂತದ ಕಾಮಗಾರಿಗಳನ್ನು ಡಿಸೆಂಬರ್-2023ರ ಒಳಗೆ ಪೂರ್ಣಗೊಳಿಸ ಬೇಕು. ಗ್ರಾ.ಪಂ.ಅಧ್ಯಕ್ಷರು,ಸದಸ್ಯರು,ಜನ ಪ್ರತಿನಿಧಿಗಳು ಹಾಗೂ ಪಿಡಿಒಗಳು ಜಲಜೀವನ್ ಮಿಷನ್ ಗುಣಮಟ್ಟದ ಕಾಮಗಾರಿಗೆ ಮುತು ವರ್ಜಿ ವಹಿಸಬೇಕು. ನೀರಿನ ಸಂಪರ್ಕಕ್ಕೆ ಬಳಸುವ
ಪೈಪ್,ನಲ್ಲಿಗಳು ಗುಣಮಟ್ಟದಿಂದ ಕೂಡಿರಬೇಕು. ಸೂಕ್ತ ಸ್ಥಳಗಳಲ್ಲಿ ಓವರ್ ಹೆಡ್ ಟ್ಯಾಂಕ್ ನಿರ್ಮಿಸಬೇಕು. ಯೋಜನೆ ಅನುಷ್ಠಾನದಲ್ಲಿ ಹಿಂದುಳಿದಿರುವ ತಾಲೂಕುಗಳಲ್ಲೂ ಪ್ರಗತಿ ಆಗಬೇಕು. ನಳದ ಸಂಪರ್ಕ ದೊಂದಿಗೆ ಆಧಾರ್ ಮಾಹಿತಿ ನೋಂದಾಯಿಸಬೇಕೆಂದರು. ಅಪೂರ್ಣ ನರೇಗಾ ಕಾಮಗಾರಿಗಳ ಪೂರ್ಣಗೊಳಿಸುವ ಹೊಣೆ ಇಒಗಳದ್ದಾಗಿದೆ ಎಂದರು. ಡಿಎಸ್ ಡಾ. ರಂಗಸ್ವಾಮಿ ನರೇಗಾ ಅನುಷ್ಠಾನ ಮಾಹಿತಿ ನೀಡಿದರು.
ಎಫ್‌ಐಆರ್ ದಾಖಲಿಸಿ
2021-22 ಸಾಲಿನ ವರೆಗಿನ ಗ್ರಾಪಂಗಳ ಸಾಮಾಜಿಕ ಲೆಕ್ಕ ಪರಿಶೋಧನಾ ವರದಿಯ ಮಾಹಿತಿ ಪಡೆದ ಅತೀಕ್, ಕಾಮಗಾರಿ ಕೈಗೊಳ್ಳ ದೆ ಅವ್ಯವಹಾರ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಿಸಿ,ಹಣ ವಸೂಲಿಗೆ ಕ್ರಮಕೈಗೊಳ್ಳೂವಂತೆ ತಾ.ಪಂ.ಇಒ ಗಳಿಗೆ ನಿರ್ದೇಶಿಸಿ ದರು. ಎಲ್ಲ ಇಲಾಖೆಗಳು ಸಮಿತಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕು. ಅವ್ಯವಹಾರವಾಗಿದ್ದರೆ ಸಂಬಂಧಿಸಿದ ಅಧಿಕಾರಿಗಳಿಂದ ಹಣ ವಸೂಲಿ ಮಾಡಬೇಕೆಂದರು.
ಜಿಲ್ಲೆಯಲ್ಲಿ 2021-22 ಸಾಲಿನವರೆಗೆ 1136 ಅವ್ಯವಹಾರ ಪ್ರಕರಣಗಳ ಬಾಕಿ ಇವೆ. 1.99 ಕೋಟಿ ರೂ.ವಸೂಲಿಗೆ ಸಮಿತಿ ಶಿಫಾ ರಸ್ಸು ಮಾಡಿದೆ. ಇದರಲ್ಲಿ 44 ಪ್ರಕರಣಗಳಲ್ಲಿ ಕಾಮಗಾರಿ ಕೈಗೊಳ್ಳದೆ ಹಣ ಪಡೆದು ವಂಚಿಸಲಾಗಿದೆ. 308 ಪ್ರಕರಣಗಳಲ್ಲಿ ಕಾಮಗಾರಿ ಗಳಿಗೆ ಹೆಚ್ಚಿನ ಮೊತ್ತ ಪಾವತಿಸಲಾಗಿದೆ.
47 ಪ್ರಕರಣಗಳಲ್ಲಿ ಸತ್ತವರು,ಇತರೆ ವ್ಯಕ್ತಿಗಳ ಹೆಸರಿನಲ್ಲಿ ಹಾಗೂ 4 ಪ್ರಕರಣಗಳಲ್ಲಿ ಮದುವೆಯಾಗಿ ಬೇರೆ ಕಡೆ ಹೋಗಿರುವದ ಹೆಣ್ಣುಮಕ್ಕಳ ಹೆಸರಿನಲ್ಲಿ ವಿವಿಧ ಯೋಜನೆಗಳ ಲಾಭ ಪಡೆಯಲಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದರು.ಜಿ.ಪಂ. ಸಿಇಒ ಡಾ.ಕೆ.ನಂದಿನಿದೇವಿ,ತೋಟಗಾರಿಕೆ ಇಲಾಖೆ ಉಪನಿರ್ದೇಕಿ ಸವಿತಾ ಮತ್ತಿತರರು ಇದ್ದರು.