ಮಂಡ್ಯ: ನಗರದ ಡಿಡಿಪಿಐ ಕಚೇರಿಗೆ ಬುಧವಾರ ಜಿಲ್ಲಾ ಪಂಚಾಯಿತಿ ಸಿಇಒ ಶೇಖ್ ತನ್ವೀರ್ ಆಸಿಫ್ ದಿಢೀರ್ ಭೇಟಿ ನೀಡಿದರು.
ಸಿಇಒ ಭೇಟಿಯಿಂದಾಗಿ ಡಿಡಿಪಿಐ ಕಚೇರಿ ಸಿಬ್ಬಂದಿಗೆ ಶಾಕ್ ನೀಡುವಂತಿತ್ತು. ಕಾರಣ ಕೆಲ ನೌಕರರು ಸಮಯವಾದರೂ ಕಚೇರಿಗೆ ಹಾಜರಾಗಿರಲಿಲ್ಲ. ಈ ವೇಳೆ ಸುಮಾರು ಹೊತ್ತು ಸಿಇಒ ಇದ್ದರೂ ನೌಕರರ ಬಾರದ ಹಿನ್ನೆಲೆಯಲ್ಲಿ ನಿಗದಿತ ಸಮಯದಲ್ಲಿ ಹಾಜರಾಗದ ಸಿಬ್ಬಂದಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಿದರು. ಅಂತೆಯೇ ಜಿಲ್ಲೆಯ ಶಾಲೆಗಳಿಗೆ ನೀಡುತ್ತಿರುವ ಪಠ್ಯಪುಸ್ತಕ ಹಾಗೂ ಸಮವಸ್ತ್ರದ ಬಗ್ಗೆ ಪರಿಶೀಲನೆ ನಡೆಸಿದರು.