ಜಿಲ್ಲೆ

ಹಿಂದಿರುವ ಮಕ್ಕಳ ಮೇಲೆ ನಿಗಾವಹಿಸಿ, ಸಿಇಒ ರಾಹುಲ್​ ರತ್ನಂ ಪಾಂಡೆಯ ಸೂಚನೆ

Kopala - Raveendra V K

ಕೊಪ್ಪಳ: ಓದಿನದಲ್ಲಿ ಹಿಂದುಳಿದ ಮಕ್ಕಳ ಮೇಲೆ ಹೆಚ್ಚು ನಿಗಾವಹಿಸಿ ಎಂದು ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಪಂ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಶಿಕ್ಷಣ ಇಲಾಖೆಯಿಂದ ಹಮ್ಮಿಕೊಂಡಿದ್ದ ಎಸ್ಸೆಸ್ಸೆಲ್ಸಿ ಲಿತಾಂಶ ಸುಧಾರಣೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಅರ್ಥ ಆಗುವಂತೆ ಕಲಿಕಾ ವಿಧಾನ ಬದಲಿಸಿ. ಎಸ್ಸೆಸ್ಸೆಲ್ಸಿ ಲಿತಾಂಶ ಸುಧಾರಣೆಗೆ 38 ನೋಡಲ್​ ಅಧಿಕಾರಿಗಳನ್ನು ನಿಯೋಜಿಸಿ, ಪ್ರತಿಯೊಬ್ಬರಿಗೆ ಆರು ಶಾಲೆ ದತ್ತು ನೀಡಿದ್ದೇವೆ. 208 ಸರ್ಕಾರಿ ಶಾಲೆಗಳಿದ್ದು, ಅಧಿಕಾರಿಗಳು ಕಡ್ಡಾಯವಾಗಿ ಶಾಲೆಗೆ ತೆರಳಿ ಅಗತ್ಯ ಮಾರ್ಗದರ್ಶನ ನೀಡಿ. ಕಲಿಕಾ ಗುಣಮಟ್ಟ ಸುಧಾರಿಸಿ. ಮಕ್ಕಳು ಉತ್ತೀರ್ಣರಾಗುವಂತೆ ನೋಡಿಕೊಳ್ಳಿ. ವಾರದಲ್ಲಿ ಕನಿಷ್ಠ ಒಂದೆರೆಡು ಶಾಲೆಗೆ ತೆರಳಿ. ಶಿಕ್ಷಕರು ನಿತ್ಯ ಮಕ್ಕಳಿಗೆ ಒಂದೊಂದು ಲೆಕ್ಕ, ಪ್ರಶ್ನೆ ನೀಡಿ. ಗ್ರೂಪ್​ ರಚಿಸಿ ಜಾಣರೊಂದಿಗೆ ಕಡಿಮೆ ಕಲಿಕೆ ಇರುವ ಮಕ್ಕಳನ್ನು ಜೋಡಿಸಿ. ವಾರಕ್ಕೊಮ್ಮೆ ರಸಪ್ರಶ್ನೆ ಕಾರ್ಯಕ್ರಮ ಏರ್ಪಡಿಸಿ. ಪ್ರತಿ 15 ದಿನಕ್ಕೊಮ್ಮೆ ಪಾಲಕರ ಸಭೆ ನಡೆಸಿ. ಮಕ್ಕಳನ್ನು ತಪ್ಪದೇ ಶಾಲೆಗೆ ಕಳಿಸುವಂತೆ ಮನವೊಲಿಸಲು ಸೂಚಿಸಿದರು.

ಶಿಕ್ಷಕರು ನಿತ್ಯ ಮಕ್ಕಳಿಗೆ ಕರೆ ಮಾಡಿ ಓದಿನ ಬಗ್ಗೆ ತಿಳಿದುಕೊಳ್ಳಿ. ಪರಿಣಾಮಕಾರಿ ಬೋಧನಾ ತಂತ್ರ ಬಳಸಿ. ಆಯಾ ವಿಷಯದಲ್ಲಿ ನುರಿತ ತಜ್ಞರಿಂದ ಕಠಿಣ ಅಂಶಗಳ ಬಗ್ಗೆ ಮಾದರಿ ಪಾಠ ಮಾಡಿಸಿ. ಬೆಳಗ್ಗೆ ಒಂದು ಅವಧಿ ವಿಶೇಷ ತರಗತಿ ನಡೆಸಿ. ಸಂಜೆ ಗುಂಪು ಅಧ್ಯಯನ ಮಾಡಿಸಿ. ಎಲ್ಲ ವಿದ್ಯಾರ್ಥಿಗಳ ಅಧ್ಯಯನ ಸಾಮಗ್ರಿ, ನೋಟ್ಸ್​, ರೆರೆನ್ಸ್​ ಪುಸ್ತಕಗಳ ಇರುವಿಕೆ ಪರಿಶೀಲಿಸಿ. ಅನಿರೀತವಾಗಿ ಮಕ್ಕಳ ಮನೆಗೆ ಭೇಟಿ ನೀಡಿ ಪಾಲಕರಿಂದ ಕಲಿಕಾ ಮಟ್ಟದ ಮಾಹಿತಿ ಪಡೆಯಿರಿ. ಸತತ ಮೂರು ದಿನ ಗೈರಾದ ಮಕ್ಕಳ ಪಟ್ಟಿ ಮಾಡಿ ಮನೆ ಭೇಟಿ ನೀಡಿ. ಶೇ.75ರಷ್ಟು ಹಾಜರಾತಿ ಬಗ್ಗೆ ತಿಳಿವಳಿಕೆ ಮೂಡಿಸುವಂತೆ ನಿರ್ದೇಶಿಸಿದರು.

ನೋಡಲ್​ ಅಧಿಕಾರಿಗಳು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ಅಂಶಗಳು ಹಾಗೂ ನೀಡಿದ ಮಾರ್ಗದರ್ಶನ ಬಗ್ಗೆ ಸಿಇಒ ಮಾಹಿತಿ ಪಡೆದರು. ಮುನಿರಾಬಾದ್​ ಡಯೇಟ್​ ಪ್ರಾಚಾರ್ಯ, ಬಿಇಒಗಳು, ಬಿಆರ್​ಸಿಗಳು ಹಾಗೂ ತಾಲೂಕು ನೋಡಲ್​ ಅಧಿಕಾರಿಗಳಿದ್ದರು.