ಬಸವಾಪಟ್ಟಣ: ಸನಾತನ ಸಂಸ್ಕೃತಿ ಮತ್ತು ಯೋಗದಿಂದ ಭಾರತ ಇಡೀ ವಿಶ್ವಕ್ಕೆ ಚಿರಪರಿಚಿತವಾಗಿದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕ ರಾಮು ಹೇಳಿದರು.
ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಸಮೀಪದ ಚಿರಡೋಣಿಯಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಯೋಗ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪತ್ರಕರ್ತ ಎಂ.ಬಿ. ರಾಜಪ್ಪ ಸೇವಾ ಪ್ರತಿನಿಧಿಗಳಿಗೆ ಯೋಗದ ಮಹತ್ವ ತಿಳಿಸಿದರು. ಸೇವಾ ಪ್ರತಿನಿಧಿಗಳಾದ ಬಿ.ಜಿ. ರೇಖಾ, ಸಾವಿತ್ರಮ್ಮ, ಶ್ರುತಿ, ಸಾಕಮ್ಮ, ಸಂಗಮ, ದೀಪಾ, ರೇಷ್ಮಾ, ಎಲ್.ಎಂ. ರುದ್ರೇಶ್, ರಾಧಾಕೃಷ್ಣ ಇದ್ದರು.