ಸಾಂಧರ್ಬಿಕ ಚಿತ್ರ 
ಜಿಲ್ಲೆ

15ರಂದು ಉಜಿರೆ ಎಸ್​ಡಿಎಂನಲ್ಲಿ ವಲಯ ಕಬಡ್ಡಿ ಆರಂಭ

ಪ್ರಮುಖ ಮುಖ್ಯಾಂಶಗಳು

  • 18ರಿಂದ ರಾಜ್ಯಮಟ್ಟದ ಸ್ಪರ್ಧೆ
  • 14 ಕಾಲೇಜುಗಳು ಭಾಗಿ
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ್​ ಕಾಲೇಜುಗಳ ವಲಯ ಪುರುಷರ ಕಬಡ್ಡಿ ಪಂದ್ಯಾವಳಿ ಎಸ್​.ಡಿ.ಎಂ. ಸ್ವಾಯತ್ತ ಕಾಲೇಜಿನ ಇಂದ್ರಪ್ರಸ್ಥ ಒಳಾಂಗಣದಲ್ಲಿ ಮೇ 15ರಂದು ಪ್ರಾರಂಭವಾಗಲಿದೆ.

14 ಕಾಲೇಜುಗಳು ಭಾಗಿ

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಂಗಳೂರು ವಲಯದ ಅಂತರ್​ ಕಾಲೇಜುಗಳ ಪಂದ್ಯಾಟಗಳು ನಡೆಯಲಿವೆ. ವಲಯದ ಸುಮಾರು 14 ಕಾಲೇಜುಗಳು ಸ್ಪರ್ಧಿಸಲಿವೆ. ಪ್ರೊ.ಕಬಡ್ಡಿ ಖ್ಯಾತಿಯ ಆಟಗಾರ ಗಗನ್​ ಗೌಡ ಉದ್ಘಾಟಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಡಾ.ಅಶೋಕ್​ ಕುಮಾರ್​ ಟಿ. ಅಧ್ಯಕ್ಷತೆ ವಹಿಸಲಿದ್ದಾರೆ.

18, 19ರಂದು ರಾಜ್ಯಮಟ್ಟದ ಕಬಡ್ಡಿ

ಎಸ್​.ಡಿ.ಎಂ. ಸ್ವಾಯತ್ತ ಕಾಲೇಜಿನ ಇದೇ ಇಂದ್ರಪ್ರಸ್ಥ ಸಭಾಂಗಣದಲ್ಲಿ ಮೇ 18 ಮತ್ತು 19ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ್​ ವಲಯ ರಾಜ್ಯಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿ ನಡೆಯಲಿದೆ. ರಾಜ್ಯದ 16 ತಂಡಗಳು ಸೆಣಸಾಡಲಿವೆ. ಅಂತಾರಾಷ್ಟ್ರೀಯ ಕಬ್ಬಡ್ಡಿ ತರಬೇತುದಾರ ರವೀಂದ್ರ ಶೆಟ್ಟಿ ಉದ್ಘಾಟಿಸಲಿದ್ದಾರೆ. ಬೆಳ್ತಂಗಡಿ ವಿಭಾಗದ ಡೆಪ್ಯುಟಿ ರೇಂಜ್​ ಅರಣ್ಯ ಅಧಿಕಾರಿ ರಂಜಿತ್​ ಕುಮಾರ್​ ಎಸ್​. ಉಪಸ್ಥಿತರಿರಲಿದ್ದಾರೆ.

ಸಮಾರೋಪ ಸಮಾರಂಭ

ಸಮಾರೋಪ ಸಮಾರಂಭದಲ್ಲಿ ಎಸ್​.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್​. ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಎಸ್​.ಡಿ.ಎಂ. ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಅಶೋಕ್​ ಕುಮಾರ್​ ಟಿ., ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರಭಾಕರ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.