ಜಿಲ್ಲೆ

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಶೂನ್ಯವಾದ ಬಜೆಟ್

ಅವಿನಾಶ್ ಜೈನಹಳ್ಳಿ

ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರಕ್ಕೆ ಶೂನ್ಯವಾದ ಬಜೆಟ್ ಇದಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ತಿಳಿಸಿದರು.

10 ವರ್ಷಗಳ ಬಜೆಟ್‌ನಲ್ಲಿ ಒಂದೂ ಯೋಜನೆ ಕೊಟ್ಟಿಲ್ಲ. ರೈಲ್ವೆ ಟರ್ಮಿನಲ್, ಕುಶಾಲನಗರಕ್ಕೆ ರೈಲು, ಜವಳಿ ಪಾರ್ಕ್, ಟೂರಿಸಂ ಪ್ಯಾಕೇಜ್ ಸಹಿತವಾಗಿ ಯಾವುದೇ ಯೋಜನೆಯ ಮಾಹಿತಿ ಇಲ್ಲ ಎಂದರು.

ಬೋಗಾದಿ ರಸ್ತೆಯಲ್ಲಿ ರಾತ್ರೊರಾತ್ರಿ ಹಂಪ್ ಹಾಕಿದ್ದರಿಂದ ಮೂರು ಜನ ಮೃತಪಟ್ಟಿದ್ದಾರೆ. ಇದಕ್ಕೆ ಯಾರು ಹೊಣೆ? ಜಿಲ್ಲಾಡಳಿತ ಪರಿಶೀಲಿಸಿ ಕ್ರಮ ಜರುಗಿಸಬೇಕು. ತಪ್ಪಿತಸ್ಥರ ವಿರುದ್ಧ ಮರ್ಡರ್ ಕೇಸ್ ದಾಖಲಿಸಬೇಕು. ಅಧಿಕಾರಿಗಳ ಮಾಡುವ ಇಂತಹ ಕೆಲಸದಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದರು.

ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮುಖಂಡರಾದ ನಾಭೂಷಣ್ ತಿವಾರಿ, ಗಿರೀಶ್ ಇದ್ದರು.