ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಝಾರಾ 
ಜಿಲ್ಲೆ

ಕರಾಟೆಯಲ್ಲಿ ಝಾರಾ ರಾಷ್ಟ್ರಮಟ್ಟಕ್ಕೆ ಆಯ್ಕೆ

ಇಂದಿರಾ ಎನ್ ಕೆ

ಕುಂದಾಪುರ: ಬೆಂಗಳೂರಿನ ಕೋರಮಂಗಲದಲ್ಲಿ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೆನ್ ವತಿಯಿಂದ ನಡೆದ 15ನೇ ರಾಜ್ಯ ಮಟ್ಟದ ಸಬ್ ಜೂನಿಯರ್ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಉಡುಪಿ ಜಿಲ್ಲೆಯ ಬೀಜಾಡಿಯ ಝಾರಾ ಚಿನ್ನದ ಪದಕ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 13ರ ವಯೋಮಿತಿಯ ರಾಜ್ಯಮಟ್ಟದ ಕುಮಿಟೆಯಲ್ಲಿ ಇವರು ಸ್ಪರ್ಧಿಸಿದ್ದಾರೆ. ಝಾರಾ ಬೀಜಾಡಿಯ ನಿವಾಸಿ ಇಮ್ರಾನ್ ಮತ್ತು ಆಸ್ಮಾ ದಂಪತಿಯ ಪುತ್ರಿ. ಕುಂದಾಪುರದ ಕೆಡಿಎಫ್ ಕರಾಟೆ ಶಾಲೆಯ ಕಿರಣ್ ಕುಂದಾಪುರ, ಸಂದೀಪ್ ವಿಕೆ, ಕೀರ್ತಿ ಜಿಕೆ, ಶಿಹಾನ್ ಶೇಖ್ ಬಸ್ರೂರು ಹಾಗೂ ಶಶಾಂಕ್ ಶೆಣೈ ಟಿ ತರಬೇತಿ ನೀಡಿದ್ದಾರೆ. ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್‌ಷಿಪ್ ದೆಹಲಿಯಲ್ಲಿ ನಡೆಯಲಿದೆ.