ಜಿಲ್ಲೆ

VIDEO| ಹಣ ನೀಡಿ ಸಂಕಷ್ಟಕ್ಕೆ ಸಿಲುಕಿದ ಜಮೀರ್ !

ತುಮಕೂರು: ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಪರ ಶಿರಾ ಕ್ಷೇತ್ರದಲ್ಲೇ ಠಿಕಾಣಿ ಹೂಡಿ ಪ್ರಚಾರ ನಡೆಸಿರುವ ಮಾಜಿ ಸಚಿವ ಜಮೀರ್ ಅಹ್ಮದ್ ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಕೇವಲ ಮೂರು ಟೀ ಗೆ 500 ರೂ. ಮುಖಬೆಲೆಯ 5-6 ನೋಟುಗಳನ್ನು ಟೀ ಅಂಗಡಿಯ ಗಲ್ಲಾಪಟ್ಟಿಗೆ ಹಾಕುವ ಮೂಲಕ ಜಮೀರ್ ಅಹ್ಮದ್ ಚುನಾವಣಾ ನೀತಿ ಸಂಹಿತೆಯನ್ನು ಗಾಳಿಗೆ ತೂರಿದ್ದಾರೆ.

ಶಿರಾ ನಗರದ ಬೇಗಮ್ ಮಹಲ್ಲಾದಲ್ಲಿ ಶನಿವಾರ ಚುನಾವಣಾ ಪ್ರಚಾರದ ವೇಳೆ ಟೀ ಅಂಗಡಿಗೆ ತೆರಳಿದ್ದ ಜಮೀರ್ ಗೆ ಅಂಗಡಿ ಮಾಲೀಕ ಪ್ರೀತಿಯಿಂದ ಟೀ ಕೊಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಕಿಸೆಯಿಂದ 500 ರೂ. ಮುಖಬೆಲೆಯ 5-6 ನೋಟುಗಳನ್ನು ಎಳೆದು ಗಲ್ಲಾಪಟ್ಟಿಗೆ ಜಮೀರ್​ ಹಾಕಿರುವುದು ಈಗ ವಿವಾದಕ್ಕೆ ಕಾರಣವಾಗಿದೆ. ನೀತಿ ಸಂಹಿತೆ ಉಲ್ಲಂಘನೆಯಾಗಿದ್ದು, ಈ ಸಂಕಷ್ಟವನ್ನೂ ಎದುರಿಸಬೇಕಿದೆ.