ಹುಳಿಯಾರು: ಜಯಕರ್ನಾಟಕ ಸಂಟನೆಯ ನೇತೃತ್ವದಲ್ಲಿ ಸಹೃದಯ ದಾನಿಗಳ ಸಹಕಾರದೊಂದಿಗೆ ಸ್ವಾತಂತ್ರ$್ಯ ದಿನಾಚರಣೆ ಪ್ರಯುಕ್ತ ಶುಕ್ರವಾರ ವೇಗದ ಸೈಕಲ್ ರೇಸ್ ಏರ್ಪಡಿಸಲಾಗಿತ್ತು.
ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಜಬೀಉಲ್ಲಾ ಅವರಿಗೆ 10 ಸಾವಿರ ರೂ. ನಗದು ಹಾಗೂ ಆಕರ್ಷಕ ಟ್ರೋಫಿ ಬಹುಮಾನ ವಿತರಿಸಲಾಯಿತು. ದ್ವೀತಿಯ ಸ್ಥಾನ ಪಡೆದ ಕನಕಪುರದ ನಿಖಿಲ್ ಅವರಿಗೆ 5 ಸಾವಿರ ರೂ.ನಗದು, ತೃತೀಯ ಸ್ಥಾನ ಪಡೆದ ಕನಕಪುರ ಪ್ರಮೋದ್ ಮಿಕ್ಸಿ ಬಹುಮಾನವಾಗಿ ಪಡೆದುಕೊಂಡರು. ಆಕಾಶ್, ಪ್ರಜ್ವಲ್, ಶರತ್, ಅಶೋಕ್ ಸಮಾಧಾನಕರ ಬಹುಮಾನ ಪಡೆದುಕೊಂಡರು.
ಮುಖ್ಯಮಂತ್ರಿಗಳ ಆರೋಗ್ಯ ಸಲಹೆಗಾರ ಡಾ.ರವಿಕುಮಾರ್ ಮಾತನಾಡಿ, ಸ್ಪರ್ಧೆಯಲ್ಲಿ ಬೈಕ್ ಸ್ಪೀಡ್ಗೆ ಸರಿಸಮನಾಗಿ ಅಂದರೆ 70 ಕಿಮೀ. ಸ್ಪೀಡ್ನಲ್ಲಿ ಗೇರ್ ಲೆಸ್ ಸೈಕಲ್ನಲ್ಲಿ ಸೈಕಲ್ ತುಳಿಯುತ್ತಿದ್ದನ್ನು ಕಂಡು ಬೆರಗಾಗಿದ್ದೇನೆ. ಕಠಿಣ ಅಭ್ಯಸದಿಂದ ಪಕ್ವತೆ ಲಭಿಸುತ್ತದೆ ಎನ್ನವುದಕ್ಕೆ ಇದು ನಿದರ್ಶನವಾಗಿದೆ. ನಿರಂತರವಾಗಿ ಇಂತಹ ಸ್ಪರ್ಧೆಗಳನ್ನು ಜಯಕರ್ನಾಟಕ ಸಂಟನೆ ಹಮ್ಮಿಕೊಂಡರೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.
ರಾಜ್ಯ ಗ್ರಾಹಕರ ವೇದಿಕೆಯ ಕಾರ್ಯದರ್ಶಿ ಕಾರ್ಗಿಲ್ಸತೀಶ್, ಕೆಂಕೆರೆ ಗ್ರಾಪಂ ಅಧ್ಯಕ್ಷ ಮಂಜುನಾಥ್, ಹುಳಿಯಾರು ಪಪಂ ಸದಸ್ಯ ಮಂಜುನಾಯ್ಕ, ರಾವೇಂದ್ರ,ಎಚ್.ಬಿ.ಬೈರೇಶ್, ತಿಮ್ಮರಾಜು, ರಾಮು, ರವಿ, ಕುರಿಹಟ್ಟಿ ಪ್ರಕಾಶ್, ಟಿ.ಸಿ.ಮಂಜುನಾಥ್, ವಿಶ್ವನಾಥ್ ಇದ್ದರು.