ಯುವ ವಾಹಿನಿ ಬಂಟ್ವಾಳದ ವತಿಯಿಂದ ಗುರುತತ್ವವಾಹಿನಿ ಮಾಲಿಕೆ ನಡೆಯಿತು. ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ, ಮಾಜಿ ಅಧ್ಯಕ್ಷ ನಾಗೇಶ್ ಪೊನ್ನೊಡಿ, ಅರುಣ್ ಕುಮಾರ್, ಪ್ರೇಮನಾಥ ಕೆ. ಮತ್ತಿತರರಿದ್ದರು. 
ಜಿಲ್ಲೆ

ಶೋಷಿತ ಸಮಾಜದ ಆಶಾಕಿರಣ : ರಾಜೇಶ್ ಸುವರ್ಣ ಅನಿಸಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಪಂಡಿತ-ಪಾಮರರೆಂಬ ಬೇಧವಿಲ್ಲದೆ ಸಕಲರೊಳಗೊಂದಾದ ಅಗೋಚರ ಶಕ್ತಿಯ ಅರಿವು ಮೂಡಿಸಿದ ಮಹಾಶಕ್ತಿ ನಾರಾಯಣಗುರುಗಳು ಸಕಲ ಶೋಷಿತ ಸಮಾಜದ ಆಶಾಕಿರಣ ಎಂದು ಯುವವಾಹಿನಿ ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ ಹೇಳಿದರು. ಹರೀಶ್ ಸಾಲ್ಯಾನ್ ಅಜೆಕಲ ಅವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 8ರ ಗುರುಸಂದೇಶ ನೀಡಿದರು.

ಮಾಜಿ ಅಧ್ಯಕ್ಷ ನಾಗೇಶ್ ಪೊನ್ನೊಡಿ, ಅರುಣ್ ಕುಮಾರ್, ಪ್ರೇಮನಾಥ ಕೆ., ರಾಮಚಂದ್ರ ಸುವರ್ಣ, ಉಪಾಧ್ಯಕ್ಷ ನಾರಾಯಣ ಪೂಜಾರಿ ಪಲ್ಲಿಕಂಡ, ನಾಗೇಶ್ ನೈಬೆಲು, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಉದಯ್ ಮೇನಾಡು, ಧನುಷ್ ಮಧ್ವ, ಹರಿಣಾಕ್ಷಿ ನಾವುರ, ಮಧುಸೂದನ್ ಮಧ್ವ, ಲೋಹಿತ್ ಬಂಟ್ವಾಳ, ಸದಸ್ಯರಾದ ಪ್ರಶಾಂತ್ ಏರಮಲೆ, ಯೋಗೀಶ್ ಪೂಜಾರಿ ಕಲ್ಲಡ್ಕ, ನಯನಾ ಪಚ್ಚಿನಡ್ಕ, ಸುಲತಾ ಬಿ.ಸಿರೋಡ್, ಚಂದ್ರಶೇಖರ್ ಕಲ್ಯಾಣಾಗ್ರಹಾರ, ವಿಘ್ನೇಶ್ ಬೊಳ್ಳಾಯಿ, ಯತೀಶ್ ಬೊಳ್ಳಾಯಿ, ನಿಕೇಶ್ ಕೊಟ್ಯಾನ್, ನಾಗೇಶ್ ಪೂಜಾರಿ ಏಲಬೆ, ಸುನೀಲ್ ನಾಯಿಲ, ಅರ್ಜುನ್ ಅರಳ, ಯಶೋಧರ್ ಕುದನೆ ಮತ್ತಿತರರು ಉಪಸ್ಥಿತರಿದ್ದರು. ನಾರಾಯಣ ಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ನಿರೂಪಿಸಿದರು.