ಜಿಲ್ಲೆ

ಯಾವುದೇ ಕಾರಣಕ್ಕೂ ಯುವನಿಧಿ ನಿಲ್ಲುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮೈಸೂರು: ಕೌಶಲ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಯಾವುದೇ ಕಾರಣಕ್ಕೂ ಯುವನಿಧಿ ಪ್ರೋತ್ಸಾಹಧನ ನಿಲ್ಲುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಮ್ಮ ಸರ್ಕಾರದ 5 ಗ್ಯಾರಂಟಿ ಯೋಜನೆಯಲ್ಲಿ ಯುವನಿಧಿ ಯೋಜನೆ ನಿರುದ್ಯೋಗಿಗಳಿಗೆ ಮಾಡಲಾಗಿದೆ. ಆದರೆ ಕೌಶಲ ತರಬೇತಿ ಪಡೆಯುವವರಿಗೆ ಯುವನಿಧಿಯನ್ನು ನಿಲ್ಲಿಸಲಾಗುತ್ತದೆ ಎಂದು ಅಪ್ರಚಾರ ಮಾಡಲಾಗುತ್ತಿದೆ ಎಂದು ಟೀಕಿಸಿದರು.

ವಿಪಕ್ಷಗಳ ಈ ಅಪ್ರಚಾರದಿಂದ ಕೌಶಲ ತರಬೇತಿ ಪಡೆಯುವವರ ಸಂಖ್ಯೆ ಇಳಿಮುಖವಾಗಿದೆ. ಇಂದಿನ ಕಾಲಕ್ಕೆ ತಕ್ಕಂತೆ ಉದ್ಯೋಗಿಗಳನ್ನು ತಯಾರು ಮಾಡಲು ಈ ಕೌಶಲ ತರಬೇತಿ ನೀಡಲಾಗುವುದು. ಆದ್ದರಿಂದ ಅಭ್ಯರ್ಥಿಗಳು ತರಬೇತಿ ಪಡೆಯಲು ಮುಂದಾಗಬೇಕು ಎಂದರು.

ಪ್ರತಿ ಅಭ್ಯರ್ಥಿಗೂ 2 ವರ್ಷದವರೆಗೆ ಯುವನಿಧಿ ನೀಡಲಾಗುವುದು. ಯುವನಿಧಿ ಫಲಾನುಭವಿಗಳು ಕೆಲಸ ಪಡೆದುಕೊಂಡರೆ ಮಾತ್ರ ಹಣ ನೀಡುವುದನ್ನು ನಿಲ್ಲಿಸಲಾಗುತ್ತದೆ ಎಂದರು. ಯುವನಿಧಿಯೊಂದಿಗೆ ಕೌಶಲ ತರಬೇತಿಯ ಹಣವೂ ಸಿಗಲಿದೆ ಎಂದು ಹೇಳಿದರು.