ಗದಗ: ಇತ್ತೀಚಿಗೆ ಹೊಳೆ ಯಾಲೂರಿನ ಕಲ್ಮೇಶ್ವರ ವಿದ್ಯಾ ಪ್ರಸಾರಕ ಸಮಿತಿಯ ಕಲಾ ,ವಿಜ್ಞಾನ, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಕವಿವಿಯ ವಿಭಾಗ ಮಟ್ಟದ ಯುವಜನೋತ್ಸವ ಜರುಗಿತು .
ಇದರಲ್ಲಿ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ ಗಿರೀಶ್ ಕೊಳಾಲ ವೈಲಿನ್ ಸೋಲು ಪ್ರಥಮ, ದೀಪ್ತಿ ಭಟ್ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಪ್ರಥಮ, ಕೃತಿ ಸುಲಾಖೆ ಪಾಶ್ಚಿಮಾತ್ಯ ಸಂಗೀತ ಪ್ರಥಮ, ಶರಣು ಬೋಗಿ ತಬಲಾ ಸೋಲು ದ್ವಿತೀಯ, ಶ್ರೇಯಸ್ ಕೃಷ್ಣಪುರ್ ಸುಗಮ ಸಂಗೀತ ದ್ವಿತೀಯ, ಯಶೋಧ ಮಾದರ್, ವಿಜಯಲಕ್ಷ್ಮಿ ಹಿರೇಮಠ, ರಂಜಿತಾ ಬಡಿಗೇರ್, ಕೃತಿ ಸುಲಾಖೆ, ಸುಮತಿ ಮುರುಗೋಡ್, ಸ್ನೇಹ ಸಮೂಹ ಗಾಯನದಲ್ಲಿ ದ್ವಿತೀಯ ಹಾಗೂ ಪದ್ಮ ವಿಭೂಷಣ ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ನಾಟ್ಯಕದಲ್ಲಿ ನೂರೊಂದೇಯಸ್ವಾಮಿ ಪಂಡಿತ್ ಪಂಚಾಕ್ಷರಿ ಗವಾಯಿಗಳವರ , ಸಂಜಯ್ ಅಕ್ಕಸಾಲಿ ಪಂಡಿತ ಪುಟ್ಟರಾಜ ಗವಾಯಿಗಳವರ, ಸಂಗೀತ ಡಿ ಎಂ ಪವಿತ್ರ ಕಲಬುರ್ಗಿ, ಗಂಗಮ್ಮ ತಾಯಿ ಸಿದ್ದಮ್ಮ ಹರ್ಪಿತ್, ಚಂದ್ರಶೇಖರ್ ಸಿದ್ದಲಿಂಗಯ್ಯ, ಬೀದರ್ ಸಂಗಣ್ಣ ವೀರಯ್ಯ ಯಾದಗಿರಿ ರಂಗಣ್ಣ ರೇವಣಸಿದ್ಧ ಬಿದರ್ ಶರಣಯ್ಯ ಹಾಗೂ ಶಶಿಕಾಂತ್ ಯಲಗೂರ್ ಸಂತೋಷನ ಪಾತ್ರದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿರುವರು ಇವರಿಗೆ ಮಾರ್ಗದರ್ಶಕರಾಗಿ ಡಾ, ಎಸ್ ಎಸ್ ಗಡ್ಡದಮಠ,ಡಾ ಸುಮಿತ್ರ ಹಿರೇಮಠ, ಮೃತ್ಯುಂಜಯ ಮಠದ ,ವಿ ಎಂ ಪಟ್ಟದಕಲ್, ಡಾ ಪಿ ಜಿ ಎ ಎಸ ಸಮಿತಿಯ ಪಂಡಿತ್ ಪಂಚಾಕ್ಷರಿ ಗವಾಯಿಗಳವರ ಸಂಗೀತ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಮೃತ್ಯುಂಜಯ ಶೆಟ್ಟರ್ ಹಾಗೂ ಸಿಬ್ಬಂದಿ ವರ್ಗದವರು ವಿಜೇತರನ್ನು ಅಭಿನಂದಿಸಿ ಮುಂದಿನ ವಿಭಾಗದಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದ್ದಾರೆಂದು ಜಿ ಟಿ ಹಿಡಿಕಿಮಠ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.