ಜಿಲ್ಲೆ

೭ರಿಂದ ಡಿವೈಎಫ್‌ಐ ಯುವಜನ ಜಾಥಾ

Mangaluru - Nishantha Narayana

ಪುತ್ತೂರು: ಬಡತನ ಹಾಗೂ ಉದ್ಯೋಗಕ್ಕೆ ಸಂಬಂಧವಿದ್ದು, ಇದರಿಂದ ದೇಶ ಅಭಿವೃದ್ಧಿಯತ್ತ ಸಾಗಬಹುದು. ಉದ್ಯೋಗ ಸೃಷ್ಟಿಯ ವಿಚಾರ ಚುನಾವಣೆ ಪ್ರಣಾಳಿಕೆಗೆ ಸೀಮಿತವಾಗುತ್ತಿದೆ. ಜಿಲ್ಲೆಯಲ್ಲಿ ಅವಕಾಶಗಳಿದ್ದರೂ, ಯುವಕರಿಗೆ ಉದ್ಯೋಗ ಮರೀಚಿಕೆಯಾಗಿದೆ. ಯುವಕರನ್ನು ಎಚ್ಚರಿಸುವ ನಿಟ್ಟಿನಲ್ಲಿ ಸೆ.೭ರಿಂದ ೯ರವರೆಗೆ ಡಿವೈಎಫ್‌ಐ ಯುವಜನ ಜಾಥಾ ನಡೆಯಲಿದೆ ಎಂದು ಡಿವೈಎಫ್‌ಐ ದ.ಕ ಅಧ್ಯಕ್ಷ ಬಿ.ಕೆ.ಇಮ್ತಿಯಾಜ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮಾತನಾಡಿ ಜಾಥಾ ಸೆ.೭ರಂದು ಬೆಳಗ್ಗೆ ೯.೩೦ಕ್ಕೆ ಬೆಳ್ತಂಗಡಿ ಬಸ್ ನಿಲ್ದಾಣದಲ್ಲಿ ಉದ್ಘಾಟನೆಗೊಳ್ಳಲಿದ್ದು, ರಂಗಕರ್ಮಿ ಸತೀಶ್ ಶೆಟ್ಟಿ ಹಿರಿಯಡ್ಕ ಚಾಲನೆ ನೀಡಲಿದ್ದಾರೆ. ಬಳಿಕ ಉಪ್ಪಿನಂಗಡಿ, ಪುತ್ತೂರು, ಬಿ.ಸಿ.ರೋಡ್, ಬಜಾಲ್, ೮ಕ್ಕೆ ವಾಮಂಜೂರುನಿಂದ ಪ್ರಾರಂಭವಾಗಿ ಗುರುಪುರ ಕೈಕಂಬ, ಮೂಡುಬಿದಿರೆ, ಮೂಲ್ಕಿ, ಸುರತ್ಕಲ್, ಬೆಂಗರೆ, ೯ಕ್ಕೆ ಮುಡಿಪುನಿಂದ ಪ್ರಾರಂಭವಾಗಿ ದೇರಳಕಟ್ಟೆ, ಉಳ್ಳಾಲ, ತೊಕ್ಕೊಟ್ಟು, ಜ್ಯೋತಿ ವೃತ್ತ ಅಲ್ಲಿಂದ ಕ್ಲಾಕ್ ಟವರ್‌ವರೆಗೆ ಮೆರವಣಿಗೆ ನಡೆಯಲಿದೆ. ಸಂಜೆ ೪ರಿಂದ ಬೃಹತ್ ಸಾರ್ವಜನಿಕ ಸಭೆ ಜರುಗಲಿದ್ದು, ಶಾಸಕ ಎಂ.ವಿಜಿನ್, ರಾಜ್ಯ ಕಾರ್ಯದರ್ಶಿ ಬಸವರಾಜ್ ಪೂಜಾರ್, ಪ್ರೊ.ಫಣಿರಾಜ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರಮುಖರಾದ ಸತೀಶನ್ ಪಿ.ಕೆ. ವಿದ್ಯಾರ್ಥಿ ನಾಯಕ ವಿನುಶ ರಮಣ, ಅಭಿಷೇಕ್ ಉಪಸ್ಥಿತರಿದ್ದರು.