ಜಿಲ್ಲೆ

ನರ್ಸಿಂಗ್ ವಿದ್ಯಾರ್ಥಿಗಳಿಗೆ ‘ಯುವ ಸ್ಪೂರ್ತಿ’

ಹುಬ್ಬಳ್ಳಿ : ಅಂತರಾಷ್ಟ್ರೀಯ ಯುವ ದಿನದ ಪ್ರಯುಕ್ತ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಹೆರಿಟೇಜ್ ವತಿಯಿಂದ ನಗರದ ಕಿಮ್್ಸ ಸಭಾಂಗಣದಲ್ಲಿ ಶುಕ್ರವಾರದಂದು ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗಾಗಿ ‘ಯುವ ಸ್ಪೂರ್ತಿ’ ಶೀರ್ಷಿಕೆಯಡಿ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.

ಅತಿಥಿಯಾಗಿದ್ದ ಮೂಲ ಶಿಕ್ಷಣ ಮತ್ತು ಸಾಕ್ಷರತೆಯ ಜಿಲ್ಲಾ ಕಾರ್ಯದರ್ಶಿ ನರೀಂದರ್ ಬರ್ವಾಲ್ ಮಾತನಾಡಿ, ಯುವಜನರ ಅಭಿವೃದ್ಧಿಗಾಗಿ ರೋಟರಿ ಕೈಗೊಂಡಿರುವ ವಿವಿಧ ಚಟುವಟಿಕೆಗಳ ಕುರಿತು ವಿವರಿಸಿದರು

ಸರ್ಕಾರಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಅನ್ನಪೂರ್ಣ ಜಿ. ಅತಿಥಿಯಾಗಿದ್ದರು.

ಆಧುನಿಕ ಭಾರತ ನಿರ್ವಣದಲ್ಲಿ ಯುವಕರ ಪಾತ್ರ ಎಂಬ ವಿಷಯದ ಕುರಿತು ಆದರ್ಶ ಗೋಖಲೆ ಮಾತನಾಡಿದರು

ಕಾರ್ಯಕ್ರಮದ ಉದ್ದೇಶದ ಕುರಿತು ಸಮುದಾಯ ಸೇವಾ ನಿರ್ದೇಶಕ ಶಿವಪ್ರಸಾದ ಬೇಕಲ್ ವಿವರಿಸಿದರು. ಸಿ.ಎಫ್.ಕುಬಿಹಾಳ ಹಾಗೂ ಇತರರು ಉಪಸ್ಥಿತರಿದ್ದರು.