ಜಿಲ್ಲೆ

ಯುವ ಜನೋತ್ಸವದಲ್ಲಿ ಮನಸೆಳೆದ ಪಥಸಂಚಲನ, ಯೋಗ, ಮಲ್ಲಕಂಬ… ರಾಜ್ಯಗಳ ಸಂಸ್ಕೃತಿ ಅನಾವರಣ

arunakunigal

ಹುಬ್ಬಳ್ಳಿ: ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ನಡೆಯುತ್ತಿರುವ 26ನೇ ರಾಷ್ಟ್ರೀಯ ಯುವ ಜನೋತ್ಸವಕ್ಕೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು.

ಇದಕ್ಕೂ ಮುನ್ನ ನಾಡಗೀತೆಯೊಂದಿಗೆ ಕಾರ್ಯಕ್ರಮ ಶುರುವಾಯಿತು. ಹಾವೇರಿಯ ಏಲಕ್ಕಿ ಹಾರ, ಏಲಕ್ಕಿ ಪೇಟ ಹಾಕಿ ಪ್ರಧಾನಿಗಳನ್ನು ವೇದಿಕೆ ಸ್ವಾಗತಿಸಲಾಯಿತು. ಬಿದರಿ ಕಲೆಯಲ್ಲಿ ಅರಳಿದ ಸ್ವಾಮಿ ವಿವೇಕಾನಂದರ ಮನಮೋಹಕ ಮೂರ್ತಿ, ಧಾರವಾಡದ ಕಸೂತಿ ಕಲೆ ಹೊಂದಿರುವ ಹ್ಯಾಂಡ್ ಲೂಮ್ ಶಾಲು ಮತ್ತು ಧಾರವಾಡ ಜಿಲ್ಲೆಯ ಗರಗ ಹಾಗೂ ಬೆಂಗೇರಿಯಲ್ಲಿ ತಯಾರಿಸಲಾದ ಧ್ವಜವನ್ನು ಟೀಕ್ ವುಡ್​ನಲ್ಲಿ ಧ್ವಜಕ್ಕೆ ಚೌಕಟ್ಟು ಹಾಕಿರುವ ಫ್ರೇಮ್ ಅನ್ನು ಉಡುಗೊರೆಯಾಗಿ ನೀಡಿ ಗೌರವಿಸಲಾಯಿತು.

ಬಳಿಕ ಪಥಸಂಚಲನ ನಡೆಯಿತು. ಯುವ ಜನತೆಯುವ ತಮ್ಮ ರಾಜ್ಯಗಳ ಸಂಸ್ಕೃತಿ ಅನಾವರಣ ಮಾಡಿದರು. ಗ್ಲೋಬಲ್​ ಶಾಲೆ ವಿದ್ಯಾರ್ಥಿಗಳಿಂದ ಅತ್ಯದ್ಭುತವಾಗಿ ಯೋಗ ಪ್ರದರ್ಶನ ನಡೆಯಿತು. ಮಲ್ಲಕಂಬ ಪ್ರದರ್ಶನ ಮೈನವಿರೇಳಿಸುವಂತಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಪಾಲ ಥಾವರಚಂದ್ ಗೆಲ್ಹೋತ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದಾರೆ. ಲಕ್ಷಾಂತರ ಯುವ ಜನತೆ ಪಾಲ್ಗೊಂಡಿದ್ದಾರೆ.