ಬೆಂಗಳೂರು: ಕರೊನಾ ವೈರಾಣು ಭೀತಿ ಹಿನ್ನೆಲೆಯಲ್ಲಿ ಯುಗಾದಿ ಹಬ್ಬಕ್ಕೆ ಮಾರುಕಟ್ಟೆ ಬಂದ್ ಆಗಲಿದೆ ಎಂಬ ಆತಂಕದಲ್ಲಿ ಹೂವು, ಹಣ್ಣು, ತರಕಾರಿ ಮತ್ತಿತರ ಪದಾರ್ಥಗಳನ್ನು ಖರೀದಿಸಲು ಜನರು ಮುಗಿಬೀಳುತ್ತಿದ್ದ ದೃಶ್ಯ ಸೋಮವಾರ ಮಾರುಕಟ್ಟೆಗಳಲ್ಲಿ ಕಂಡುಬಂತು.
ಸಾಮಾನ್ಯವಾಗಿ ಹಬ್ಬ ಬಂತೆಂದರೆ ಹೂವು, ಹಣ್ಣುಗಳ ದರ ಏರಿಕೆಯಾಗುವುದು ಸಾಮಾನ್ಯ. ಆದರೆ, ಈ ಬಾರಿ ಹೂವಿನ ದರ ನೆಲಕಚ್ಚಿದೆ. ಕನಕಾಂಬರ ಕೆ.ಜಿ.ಗೆ 200ರಿಂದ 300 ರೂ., ಮಲ್ಲಿಗೆ 180ರಿಂದ 200 ರೂ., ಸೇವಂತಿಗೆ ಕೆ.ಜಿ.ಗೆ 60ರಿಂದ 80 ರೂ. (ಒಂದು ಮಾರಿಗೆ 40 ರಿಂದ 50 ರೂ.) ಮಾರಾಟವಾಗಿದೆ.
ತರಕಾರಿ ದರದಲ್ಲಿ ತುಸು ಏರಿಕೆ: ಕಲಾಸಿಪಾಳ್ಯ ಎಂಪಿಎಂಸಿ ಮಾರುಕಟ್ಟೆಯಲ್ಲಿ ತರಕಾರಿ ಸಗಟು ಮಾರಾಟದಲ್ಲಿ
ಸಗಟು ವ್ಯಾಪಾರಸ್ಥರಿಂದ ಸ್ವಯಂಘೋಷಿತ ಬಂದ್
ಹಳೇ ತರಗುಪೇಟೆ, ಹೊಸ ತರಗುಪೇಟೆಯ ಬಹುತೇಕ ಸಗಟು ವ್ಯಾಪಾರಸ್ಥರು ಸ್ವಯಂಘೋಷಿತ ಬಂದ್ ಆಚರಿಸಿದ್ದಾರೆ. ‘ಸರ್ಕಾರವೇ ಲಾಕ್ಡೌನ್ ಘೋಷಿಸಿದೆ. ಅದನ್ನು ಎಲ್ಲರೂ ಪಾಲಿಸಬೇಕು. ನಮ್ಮ ಮಟ್ಟಿಗಂತೂ ಆರೋಗ್ಯಕ್ಕಿಂತ ವ್ಯಾಪಾರ ದೊಡ್ಡದಲ್ಲ’ ಎನ್ನುತ್ತಾರೆ ಹಳೇ ತರಗುಪೇಟೆ ವ್ಯಾಪಾರಸ್ಥರೊಬ್ಬರು.
ಔಷಧ ಸಿಂಪಡಣೆ
ಕೃಷ್ಣರಾಜೇಂದ್ರ ಮಾರುಕಟ್ಟೆ ,ಕಲಾಸಿಪಾಳ್ಯ ಮಾರುಕಟ್ಟೆ ಸುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಬಿಬಿಎಂಪಿ ಅಧಿಕಾರಿಗಳು ಮನವಿ ಮಾಡಿದ್ದಾರೆ. ಜನಸಂದಣಿ ಸ್ಥಳಗಳಲ್ಲಿ ಪಾಲಿಕೆ ವತಿಯಿಂದ ಸೋಮವಾರ ಔಷಧ ಸಿಂಪಡಿಸಲಾಯಿತು.
ಕರೊನಾ ಸೋಂಕಿತರು ರಾಜ್ಯದೆಲ್ಲೆಡೆ ದಿನೇದಿನೆ ಹೆಚ್ಚಳವಾಗುತ್ತಿದ್ದಾರೆ. ಕೆಲವು ದಿನ ಜನರು ರಸ್ತೆಗೆ ಇಳಿಯದಿರುವುದು ಒಳ್ಳೆಯದು. ಇದರಿಂದ ವ್ಯಾಪಾರಸ್ಥರಿಗೆ ಒಂದೆರಡು ದಿನ ಸಮಸ್ಯೆಯಾಗಬಹುದು. ರಾಜ್ಯದ ಜನರ ಹಿತದೃಷ್ಟಿಯಿಂದ ಲಾಕ್ಡೌನ್ ಮಾಡುವುದು ಅಗತ್ಯ. | ಮಂಜುನಾಥ್ ಸಗಟು ಹೂವಿನ ವ್ಯಾಪಾರಿ, ಕೆ.ಆರ್. ಮಾರುಕಟ್ಟೆ