ಜಿಲ್ಲೆ

ಪುಲ್ವಾಮಾ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ

ಮಂಜುನಾಥ ಕೋಳಿಗುಡ್ಡ

ಬೆಳಗಾವಿ: ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಜಮ್ಮು ಕಾಶ್ಮೀರದ ಪುಲ್ವಾಮಾ ಸೆಕ್ಟರ್ ನಲ್ಲಿ ಅರೆಸೇನಾಪಡೆಯ ವಾಹನದ ಮೇಲೆ ಉಗ್ರವಾದಿಗಳು ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಜಿಲ್ಲೆಯ ಮಾಜಿ ಸೈನಿಕರ ಸಂಘಟನೆಗಳ ಮಹಾಒಕ್ಕೂಟ ಹಾಗೂ ಮಹಾಒಕ್ಕೂಟದ ಮಹಿಳಾ ಸಂಘಟನೆಯ ವತಿಯಿಂದ ಹುತಾತ್ಮರಾದ ಯೋಧರಿಗೆ ಮೇಣದಬತ್ತಿ ಬೆಳಗಿಸಿ ಮೌನಚರಣೆಯನ್ನು ಆಚರಿಸಿದರು. ಬಳಿಕ ದೇಶಭಕ್ತಿಯ ಘೋಷಣೆಗಳೊಂದಿಗೆ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಹಾ ಒಕ್ಕೂಟದ ಅಧ್ಯಕ್ಷ ಜಗದೀಶ ಪೂಜೇರಿ, ಗೌರವಾಧ್ಯಕ್ಷರಾದ ರಮೇಶ ಚೌಗಲಾ,ಉಪಾಧ್ಯಕ್ಷ ಸಂಗಪ್ಪ ಮೇಟಿ, ಶಿವಬಸಪ್ಪ ಕಾಡನ್ನವರ, ಮಡಿವಾಳಪ್ಪ ಕಲಬಾವಿ, ಸಂತೋಷ ಮಠಪತಿ, ಅಶೋಕ ಮಜಗಿ, ಸಿ ವಿ ಸವಡಿ ಮಹಿಳಾ ಘಟಕದ ಅಧ್ಯಕ್ಷ ಸುನಿತಾ ಪಟ್ಟಣಶೆಟ್ಟಿ, ಉಪಾಧ್ಯಕ್ಷ ವೈಶಾಲಿ ಸುದಾಗಡೆ, ಪ್ರತಿಭಾ ಬಂಡಿ, ಸಂತೋಷಕಲಾ ಕುಂಬಾರ, ಉಷಾ ದೇಸಾಯಿ, ಸಾವಿತ್ರಿ ಜಮಾದಾರ ಇತರರಿದ್ದರು.