ಅತ್ತಿಕುಡಿಗೆ ಗ್ರಾಪಂ ವ್ಯಾಪ್ತಿಯ ಬಸರೀಕಟ್ಟೆಯ ಶ್ರೀ ಸದ್ಗುರು ವಿದ್ಯಾ ಸಂಸ್ಥೆಯಲ್ಲಿ ಕಳ್ಳತನ ಪ್ರಯತ್ನ ನಡಸಿರುವುದು. 
ಜಿಲ್ಲೆ

ಕಳ್ಳತನಕ್ಕೆ ಯತ್ನಸಿದ್ದ ಯೂಟ್ಯೂಬರ್ ಬಂಧನ

ಜಿ.ಹೆಚ್. ಧನ್ಯಕುಮಾರ್

ಜಯಪುರ: ಬಸರೀಕಟ್ಟೆಯ ಶ್ರೀಸದ್ಗುರು ವಿದ್ಯಾಸಂಸ್ಥೆಯಲ್ಲಿ ಕಳ್ಳತನಕ್ಕೆ ಯತ್ನಸಿದ್ದ ಕಳ್ಳ ಯೂಟ್ಯೂಬರ್‌ನನ್ನು ಭಾನುವಾರ ಶಾಲೆ ಪಾಲಕರು ಹಿಡಿದು ಧರ್ಮದೇಟು ಕೊಟ್ಟು ಪೋಲಿಸರಿಗೊಪ್ಪಿಸಿದ್ದಾರೆ.
ಶನಿವಾರ ಶ್ರೀ ಸದ್ಗುರು ವಿದ್ಯಾಸಂಸ್ಥೆಯ ಪ್ರೌಢಶಾಲೆ ಮತ್ತು ಶ್ರೀ ಸದ್ಗುರು ವಿದ್ಯಾ ಮಂದಿರದ ವಿದ್ಯಾರ್ಥಿಗಳ ವಾರ್ಷಿಕೋತ್ಸವ ಕಾರ್ಯಕ್ರಮದ ವೀಡಿಯೋ ರೆಕಾರ್ಡ್ ಮಾಡಲು ಬಂದ ಬೆಳ್ತಂಗಡಿ ಮೂಲದ ಯೂಟ್ಯೂಬರ್ ಶರತ್ ಕಾರ್ಯಕ್ರಮದ ವಿಡಿಯೋ ರೆಕಾರ್ಡ್ ಮಾಡಿ, ಶಾಲೆಯಲ್ಲಿ ಉಳಿದುಕೊಂಡಿದ್ದ . ಶನಿವಾರ ಮಧ್ಯ ರಾತ್ರಿ ಶಾಲೆ ರೂಮ್‌ನ ಬೀಗ ಮುರಿದು ಒಳ ಪ್ರವೇಶಿಸಿ ಬೀರುವಿನ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಆಗ ಉಂಟಾದ ಶಬ್ಧ ಗಮನಿಸಿದ ಶಾಲೆ ಹತ್ತಿರದ ಗ್ರಾಮಸ್ಥರೊಬ್ಬರು ಅಕ್ಕ ಪಕ್ಕದ ಮನೆಯವರಿಗೆ ತಿಳಿಸಿ ಆರೋಪಿಯನ್ನು ಹಿಡಿದಿದ್ದಾರೆ. ಜಯಪುರ ಪಿಎಸೈ ಅಂಬರೀಶ್ ಆರೋಪಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.