ಜಿಲ್ಲೆ

ಹೊಡೆದಾಟ ಪ್ರಕರಣ ಐವರು ವಶಕ್ಕೆ


ಮಂಗಳೂರು: ನಗರದ ಹೊರವಲಯದ ನೀರುಮಾರ್ಗ ಸಮೀಪ ಯುವಕರ ತಂಡವೊಂದು ಹೊಡೆದಾಟ ನಡೆಸಿದ ಪ್ರಕರಣಕ್ಕೆ ಸಂಬಂಧಸಿ 5ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.


ಮೊಹಮ್ಮದ್ ಶರ್ೀ, ಅಬ್ದುಲ್ ರಹಿಮಾನ್, ಚೇತನ್ ಹಾಗೂ ವಿಕ್ರಮ್ ಪ್ರಕರಣದ ಆರೋಪಿಗಳು.
ಪ್ರಕರಣ ವಿವರ: ಆ.30ರಂದು ಬೆಳಗ್ಗೆ 11.15ಕ್ಕೆ ನೀರುಮಾರ್ಗ ಅಂಚೆ ಕಚೇರಿಯ ಬಳಿಯ ಸಾರ್ವಜನಿಕ ರಸ್ತೆ ಬದಿಯಲ್ಲಿ ಆರೋಪಿಗಳು ಪರಸ್ಪರ ಹೊಡೆದಾಡಿಕೊಂಡು ಸಾರ್ವಜನಿಕ ಶಾಂತಿ ಕದಡಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಮಂಗಳೂರು ಗ್ರಾಮಾಂತರ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.