raichur 
ಜಿಲ್ಲೆ

ಯುವಕ ಸಾವು :6 ಜನರ ವಿರುದ್ಧ ಪ್ರಕರಣ ದಾಖಲು

ರಾಯಚೂರು ನಗರದ ಎಲ್‌ಬಿಎಸ್ ನಗರದಲ್ಲಿ ನಿಂತುಕೊಂಡಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದರಿಂದ ಗಂಭೀರಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಹರಿಜನವಾಡ ಬಡಾವಣೆಯ ನಿವಾಸಿ ತಾಯಪ್ಪ (30) ಮೃತ ಯುವಕ.

ಸೆ.27 ರಂದು ನಗರ ಎಲ್ಬಿಎಸ್‌ನಗರ ಬಡಾವಣೆಯ ತಿಮ್ಮಾರೆಡ್ಡಿ ಕಂಪೌಂಡ್ ಹತ್ತಿರ ಮಾತನಾಡಿಕೊಂಡು ನಿಂತಿದ್ದ ಹರಿಜನವಾಡದ ತಾಯಪ್ಪ ಎಂಬ ಯುವಕ ಮೇಲೆ ಬಿ.ತಿಮ್ಮಾರೆಡ್ಡಿ ಬೆಂಬಿಗಲರು ಹಲ್ಲೆ ನಡೆಸಿ ಗಾಯಗೊಳಿಸಿದ್ದರು. ಗಾಯಗೊಂಡಿದ್ದ ತಾಯಪ್ಪನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಚಿಕಿತ್ಸೆ ಫಲಕಾರಿಯಾಗದೇ ಸೆ.28 ರಂದು ಮೃತಪಟ್ಟಿದ್ದಾನೆ. ಘಟನೆಗೆ ಸಂಬಂಧಿಸಿದಂತ ಮೃತ ಯುವಕನ ತಾಯಿ ಗೋವಿಂದಮ್ಮ ನೀಡಿದ ದೂರಿನ ಮೇರೆಗೆ ಮಾರ್ಕೆಟ್ ಯಾರ್ಡ್‌ನಲ್ಲಿ ಬಿ.ತಿಮ್ಮಾರೆಡ್ಡಿ, ಸಂತೋಷ ರೆಡ್ಡಿ, ಅಖಿಲರೆಡ್ಡಿ, ಸದ್ದಾಂ ಮೆಕಾನಿಕ್, ತರುಣರೆಡ್ಡಿ, ಕೃಷ್ಣ ವಿರುದ್ಧ ಎಸ್ಸಿಎಸ್ಟಿ ದೌರ್ಜನ್ಯ ತಡೆ ತಿದ್ದುಪಡಿ ಕಾಯ್ದೆ ಕುರಿತು ಪ್ರಕರಣ ದಾಖಲಾಗಿದೆ.