ನೀರು ಪಾಲಾದ ಮಿಳ್ಳಘಟ್ಟದ ಹರೀಶ್ 
ಜಿಲ್ಲೆ

ತುಂಗಾ ಚಾನಲ್‌ನಲ್ಲಿ ಯುವಕ ನೀರು ಪಾಲು

ನವೀನ ಬಿ.ಎಂ

ಶಿವಮೊಗ್ಗ: ತುಂಗಾ ಜಲಾಶಯ ಬಳಿ ಚಾನಲ್‌ನಲ್ಲಿ ಯುವಕನೊಬ್ಬ ನೀರು ಪಾಲಾಗಿದ್ದಾನೆ.

ಮಿಳ್ಳಘಟ್ಟದ ಹರೀಶ್(24) ನೀರು ಪಾಲಾದ ಯುವಕ. ತಾಲೂಕಿನ ಗಾಜನೂರು ಜಲಾಶಯದ ಬಳಿ ಗುರುವಾರ ಸಂಜೆ ನಾಲ್ವರು ತೆರಳಿದ್ದರು. ಜತೆಯಲ್ಲೇ ಕುಳಿತು ಪಾರ್ಟಿ ಕೂಡ ಮಾಡಿದ್ದರು. ಡ್ಯಾಂ ಪ್ರವೇಶಕ್ಕೆ ನಿಷೇಧ ಹಿನ್ನಲೆ ಚಾನಲ್ ಪಕ್ಕದ ದಾರಿಯಲ್ಲಿ ಸ್ನೇಹಿತರು ಹೋಗಿದ್ದು, ಅಲ್ಲಿನ ಕಾಮಗಾರಿ ನಡೆಯುತ್ತಿರುವ ಸೇತುವೆ ಬಳಿ ಹೋಗಿದ್ದ ವೇಳೆ ಹರೀಶ್ ನೀರು ಪಾಲಾಗಿದ್ದಾನೆ ಎನ್ನಲಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಹರೀಶ್‌ಗಾಗಿ ಯಾಂತ್ರಿಕ ಬೋಟ್‌ನಲ್ಲಿ ಹುಡುಕಾಟ ಮುಂದುವರಿಸಿದ್ದಾರೆ. ಸ್ಥಳೀಯ ಮೀನುಗಾರರು, ಈಜುಗಾರರು ಕಾರ್ಯಾಚರಣೆಗೆ ಸಾಥ್ ನೀಡಿದ್ದಾರೆ. ತುಂಗಾನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.