ಹರಪನಹಳ್ಳಿಯ ನೀಲಗುಂದ ವಲಯ ಮಟ್ಟದ ಕ್ರೀಡಾಕೂಟವನ್ನು ಗ್ರಾಪಂ ಅಧ್ಯಕ್ಷೆ ಟಿ.ಹೊನ್ನಮ್ಮ ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಗ್ರಾಪಂ ಉಪಾಧ್ಯಕ್ಷೆ ಭೋವಿ ದುರುಗಮ್ಮ, ಸದಸ್ಯರಾದ ನಾಗೇಂದ್ರಪ್ಪ, ಯಲ್ಲಪ್ಪ, ರಾಜಪ್ಪ, ನಾಗಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಪಿ.ನಿಂಗರಾಜ ಇದ್ದರು. 
ಜಿಲ್ಲೆ

ಯುವಜನತೆ ಕ್ರೀಡಾಕೂಟದತ್ತ ಒಲವು ತೋರಲಿ

ಹರಪನಹಳ್ಳಿ: ಕ್ರೀಡಾಕೂಟಗಳಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವುದು ಬಹು ಮುಖ್ಯವಾಗಿದೆ ಎಂದು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಕೆ.ಷಣ್ಮುಖಪ್ಪ ಹೇಳಿದರು.

ತಾಲೂಕಿನ ಅರೇಮಜ್ಜಿಗೇರಿ ಗ್ರಾಮದಲ್ಲಿ ಮಂಗಳವಾರ ಅಯೋಜಿಸಿದ್ದ ನೀಲಗುಂದ ವಲಯ ಮಟ್ಟದ ಕ್ರೀಡಾಕೂಟ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಸೋಲು-ಗೆಲವು ಸಾಮಾನ್ಯ, ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ದೇಶದ ಯುವಜನರಲ್ಲಿ ಕ್ರೀಡಾಕೂಟದ ಅಭಿರುಚಿಯ ಕೊರತೆ ಎದ್ದು ಕಾಣುತ್ತಿದೆ. ಈ ನಿಟ್ಟಿನಲ್ಲಿ ಕ್ರೀಡೆಗೆ ಹೆಚ್ಚು ಪ್ರಾಧಾನ್ಯತೆ ನೀಡಬೇಕು ಎಂದರು.

ನೀಲಗುಂದ ಕ್ಲಷ್ಟರ್ ಮಟ್ಟದ ಸಿಆರ್‌ಪಿ ರವಿ ಮಾತನಾಡಿ, ಮಕ್ಕಳಿಗೆ ಪಠ್ಯ ಎಷ್ಟು ಮುಖ್ಯವೋ ಕ್ರೀಡಾಕೂಟದಲ್ಲಿ ಭಾಗವಹಿಸುವುದು ಅಷ್ಟೇ ಮುಖ್ಯವಾಗಿದೆ. ಮಕ್ಕಳು ದೈಹಿಕವಾಗಿ ಸದೃಢರಾಗಲು ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದರು.

ಚಾಲನೆ

ಕೆ.ಕಲ್ಲಹಳ್ಳಿ ಗ್ರಾಪಂ ಅಧ್ಯಕ್ಷೆ ಟಿ.ಹೊನ್ನಮ್ಮ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಆನಂದನಾಯ್ಕ ಹಾಗೂ ಮುಖಂಡರಾದ ಟಿ.ಬಸವರಾಜ, ಎ.ನಿಂಗಪ್ಪ ಧ್ವಜ ವಂದನಾ ಕಾರ್ಯಕ್ರಮ ನೆರವೇರಿಸಿಕೊಟ್ಟರು.

ವಲಯ ಸಂಚಾಲಕ ಪದ್ಮರಾಜ್ ಜೈನ್ ಕ್ರೀಡಾಪಟುಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕ್ರೀಡಾಕೂಟದಲ್ಲಿ ನೀಲಗುಂದ ಕ್ಲಷ್ಟರ್ ಮಟ್ಟದ 13 ಶಾಲೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಗ್ರಾಪಂ ಉಪಾಧ್ಯಕ್ಷೆ ಭೋವಿ ದುರುಗಮ್ಮ, ಸದಸ್ಯರಾದ ನಾಗೇಂದ್ರಪ್ಪ, ಯಲ್ಲಪ್ಪ, ರಾಜಪ್ಪ, ನಾಗಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಪಿ.ನಿಂಗರಾಜ, ಮುಖ್ಯ ಶಿಕ್ಷಕರಾದ ಹನುಮಂತನಾಯ್ಕ, ಗುರುಪ್ರಸಾದ್, ಉಸ್ಮಾನ್, ಸಿದ್ದಪ್ಪ, ಶಿಕ್ಷಕರಾದ ಧರ್ಮನಾಯ್ಕ, ರಾಜೇಂದ್ರ, ಮಂಜುನಾಥ್, ಜಯಣ್ಣ, ರವೀಂದ್ರ, ಕೊಟ್ರೇಶ ಇತರರಿದ್ದರು.