ಜಿಲ್ಲೆ

ಯುವಜನರ ಸಂಕಲ್ಪ ಸಮಾವೇಶ 19ರಂದು

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ
ಯುವ ಜನರಲ್ಲಿ ಉನ್ನತ ನೀತಿ, ನೈತಿಕತೆ, ಜೀವನ ಮೌಲ್ಯ ಬೆಳೆಸುವ ಮೂಲಕ ಮಹಿಳೆಯರ ಘನತೆ ಎತ್ತಿ ಹಿಡಿಯುವ ನಿಟ್ಟಿನಲ್ಲಿ ಆಲ್​ ಇಂಡಿಯಾ ಡೆಮಾಕ್ರೆಟಿಕ್​ ಯೂತ್​ ಆರ್ಗನೈಸೇಷನ್​ ವತಿಯಿಂದ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಸೆ. 19ರಂದು ಬೆಳಗ್ಗೆ 10.30ಕ್ಕೆ ವಲಯ ಮಟ್ಟದ ಮಹಿಳೆಯ ಘನತೆ ಮತ್ತು ಮಾನವ ಮೌಲ್ಯ ಉಳಿಸಲು ಯುವಜನರ ಸಂಕಲ್ಪ ಸಮಾವೇಶ ಆಯೋಜಿಸಲಾಗಿದೆ ಎಂದು ಸಂಘಟನೆ ಅಧ್ಯಕ್ಷ ಶರಣಪ್ಪ ಉದ್ಭಾಳ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಲೋಕಾಯುಕ್ತ ಎನ್​. ಸಂತೋಷ್​ ಹೆಗಡೆ ಸಮಾವೇಶ ಉದ್ಘಾಟಿಸುವರು. ಎಐಡಿವೈಒ ಅಖಿಲ ಭಾರತ ಉಪಾಧ್ಯಕ್ಷ ಡಾ. ಜಿ. ಶಶಿಕುಮಾರ ಆಶಯ ನುಡಿಗಳನ್ನಾಡುವರು. ಉದ್ಘಾಟನೆ ಬಳಿಕ "ಇಂದಿನ ಯುವ ಮನಸ್ಸಿನ ತಲ್ಲಣಗಳು' ವಿಷಯ ಕುರಿತು ಶಿವಮೊಗ್ಗದ ಹಿರಿಯ ಮನೋಚಿಕಿತ್ಸಕ ನಡಹಳ್ಳಿ ವಸಂತ್​ ಮಾತನಾಡಲಿದ್ದಾರೆ. ಮಧ್ಯಾಹ್ನ ನಡೆಯುವ ಗೋಷ್ಠಿಯಲ್ಲಿ ಲೈಂಗಿಕ ಅಪರಾಧಗಳು-ಕಾರಣ ಮತ್ತು ಪರಿಹಾರಗಳು ಕುರಿತು ಮನೋವೈದ್ಯೆ ಡಾ. ಸುಜ್ಞಾನಿದೇವಿ ಪಾಟೀಲ ಮಾತನಾಡಲಿದ್ದಾರೆ. ಮಧ್ಯಾಹ್ನ 3.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ರಾಮಾಂಜನಪ್ಪ ಆಲ್ದಳ್ಳಿ ಸಮಾರೋಪ ನುಡಿಗಳನ್ನಾಡಲಿದ್ದಾರೆ ಎಂದರು.
ಸಿದ್ದಲಿಂಗ ಬಾಗೇವಾಡಿ, ಭವಾನಿಶಂಕರ, ಅಕ್ಷಯ, ರಣಜಿತ್​ ದೂಪದ್​ ಇತರರು ಇದ್ದರು.