ಜಿಲ್ಲೆ

ಅಪ್ರಾಪ್ತೆ ಮೇಲೆ ಯುವಕ ಅತ್ಯಾಚಾರ

ವೀರೇಶ ಸೌದ್ರಿ

ಯಲ್ಲಾಪುರ: ಯಲ್ಲಾಪುರ: ಆರು ವರ್ಷದ ಬಾಲಕಿ ಮೇಲೆ ಯುವಕ ಅತ್ಯಾಚಾರ ಎಸಗಿದ ಅಮಾನವೀಯ ಘಟನೆ ತಾಲೂಕಿನ ಮದನೂರಿನಲ್ಲಿ ನಡೆದಿದೆ. 1ನೇ ತರಗತಿಯ ಬಾಲಕಿ ಅತ್ಯಾಚಾರಕ್ಕೊಳಗಾಗಿದ್ದಾಳೆ. ಹಳಿಯಾಳ ತಾಲೂಕಿನ ಭಾಗವತಿಯ ಗ್ರಾಮದ ಅಸ್ಲಾಂ ಅದಾಮ್‌ಸಾಬ್ ಸತ್ತಾರ (20) ಅತ್ಯಾಚಾರ ಎಸಗಿದ ಆರೋಪಿ. ಯಲ್ಲಾಪುರಕ್ಕೆ ಕುಟುಂಬಸ್ಥರ ಮನೆಗೆ ಬಂದಿದ್ದ ವೇಳೆ ಬಾಲಕಿಯನ್ನು ಪುಸಲಾಯಿಸಿ ಊರಿನ ಪಾಳು ಬಿದ್ದ ದೇವಸ್ಥಾನಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾನೆ ಎನ್ನಲಾಗಿದೆ.

ಮಗು ಅಳುವುದನ್ನು ಗಮನಿಸಿದ ಪಾಲಕರು ಮಗುವಿನ ಬಳಿ ಕೇಳಿದಾಗ ಪ್ರಕರಣ ಬಯಲಿಗೆ ಬಂದಿದೆ. ತಕ್ಷಣ ಸ್ಥಳೀಯರು ಆತನನ್ನು ಹಿಡಿದು, ನಡುಬೀದಿಯಲ್ಲಿ ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.