ಹಾವೇರಿ: ರಾಜ್ಯದ ಯುವಕರು ಕೆಲಸ ಗಿಟ್ಟಿಸಿಕೊಳ್ಳಲು ಇದಕ್ಕಿಂತ ಒಳ್ಳೆಯ ಅವಕಾಶ ಇಲ್ಲವೆಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಹೊರರಾಜ್ಯದ ಕೆಲಸಗಾರರು ಕರೊನಾ ವೈರಸ್ ಲಾಕ್ಡೌನ್ನಿಂದಾಗಿ ವಲಸೆ ಹೋಗಿರುವುದರಿಂದ ಕರ್ನಾಟಕದ ಯುವಕರಿಗೆ ಕೆಲಸವನ್ನು ಗಿಟ್ಟಿಸಿಕೊಳ್ಳಲು ಇಂದೊಂದು ಸದಾವಕಾಶ. ಇದನ್ನು ಬಳಸಿಕೊಳ್ಳಿ ಎಂದು ಇಂದು ಬೆಳಗ್ಗೆ ಬಿ.ಸಿ. ಪಾಟೀಲ್ ಅವರು ಟ್ವೀಟ್ ಮಾಡಿದ್ದಾರೆ.
ಯುವಕರನ್ನು ಸಾಮಾಜಿಕ ಜಾಲತಾಣ ಮೂಲಕ ಸೆಳೆದಿರುವ ಪಾಟೀಲ್, ಬೃಹತ್ ನಗರ ಹಾಗೂ ಪಟ್ಟಣಗಳಲ್ಲಿ ಉದ್ಯೋಗದ ಸುವರ್ಣಾವಕಾಶವಿದೆ ಎಂಬರ್ಥದಲ್ಲಿ ಹೇಳಿದ್ದಾರೆ.
ಮಹಾಮಾರಿ ಕರೊನಾ ವೈರಸ್ ಹರಡಿದ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಲಾಕ್ಡೌನ್ ಹೇರಿರುವುದರಿಂದ ಕೆಲಸವಿಲ್ಲದೇ ಬಹುತೇಕರು ತಮ್ಮ ತಮ್ಮ ರಾಜ್ಯಗಳಿಗೆ ಹಾಗೂ ಊರುಗಳಿಗೆ ಮರಳಿದ್ದಾರೆ. ಹೋದವರಲ್ಲಿ ಬಹುತೇಕರ ಮರಳಿ ಮರುವುದಿಲ್ಲ ಎಂಬುದು ಹಲವರ ಅಭಿಪ್ರಾಯವೂ ಆಗಿದೆ. (ಏಜೆನ್ಸೀಸ್)