ಜಿಲ್ಲೆ

ರೇಂಜರ್​ ಸ್ವಿಂಗ್​ನಿಂದ ಬಿದ್ದು ಯುವತಿ ಸಾವು; Five Arrested

ವಿಜಯಪುರ: ರೇಂಜರ್​ ಸ್ವಿಂಗ್ (Ranger Swing) ಬೆಲ್ಟ್​ ಕಟ್​ ಆದ ಪರಿಣಾಮ ಯುವತಿಯಿಬ್ಬಳು ಅದರಿಂದ ಕೆಳಗೆ ಬಿದ್ದು ಮೃತಪಟ್ಟಿರುವ ದಾರುಣ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ನವಭಾಗ್​ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಫಿಶ್​ ಟನಲ್​ ಎಕ್ಸ್​ಪೋದಲ್ಲಿ ಅವಘಡ ಸಂಭವಿಸಿದೆ. ಮೃತ ಯುವತಿಯನ್ನು ನಿಖಿತಾ ಬಿರಾದಾರ್ (21) ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಪೊಲೀಸರು ಐವರನ್ನು ಅರೆಸ್ಟ್​ (Five Arrested) ಮಾಡಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

ಬಸವನಬಾಗೇವಾಡಿ ತಾಲ್ಲೂಕಿನ  ಇಂಗಳೇಶ್ವರ ಗ್ರಾಮದ ಶಿಕ್ಷಕ ಅರವಿಂದ ಬಿರಾದರ ಪತ್ನಿ ಗೀತಾ, ಪುತ್ರಿ ನಿಖಿತಾ ಬಿರಾದರ ಹಾಗೂ ಪರಿಚಯಸ್ಥರೊಂದಿಗೆ ನವಭಾಗ್​ ರಸ್ತೆಯಲ್ಲಿ ಆಯೋಜಿಸಲಾಗಿದ್ದ ಫಿಶ್​ ಟನಲ್​ ಎಕ್ಸ್​ಪೋಗೆ ಬಂದಿದ್ದರು.

ರೇಂಜರ್ ಸ್ವಿಂಗ್​ನಲ್ಲಿ (Ranger Swing) ನಿಖಿತ ಹಾಗೂ ಆಕೆಯ ಗೆಳತಿಯರು ಕುಳಿತುಕೊಂಡಿದ್ದು, ಗೀತಾ ಬಿರಾದಾರ್ ಆಪರೇಟರ್​​ಗೆ ಬೆಲ್ಟ್ ಹಾಗೂ ಇತರೆ ಸುರಕ್ಷತಾ ಸಾಧನಗಳು ಸರಿಯಾಗಿವೆಯಾ ಎಂದು ಪ್ರಶ್ನೆ ಮಾಡಿದ್ದರು. ಆಗ ಆರಪೇಟರ್ ಎಲ್ಲವೂ ಸರಿ ಇದೆ ಎಂದು ಹೇಳಿದ್ದನು. ರೇಂಜರ್ ಸ್ವಿಂಗ್ ಆರಂಭವಾಗುತ್ತಿದ್ದಂತೆ ನಿಖಿತಾ ಕುಟುಂಬದವರು ಹಾಗು ಆಕೆ ಗೆಳತಿ ರೇಂಜರ್ ಸ್ವಿಂಗ್ ನಲ್ಲಿ ಕುಳಿತಿದ್ದವರ ವಿಡಿಯೋ ಮಾಡುತ್ತಿದ್ದರು. ರೇಂಜರ್ ಸ್ವಿಂಗ್ ಆನ್ ಆಗಿ ತೆಲೆ ಕೆಳಗಾಗಿ ಮಾಡುತ್ತಿದ್ದಂತೆ ಅದರಲ್ಲಿದ್ದವರು ಭಯದಿಂದ ಕಿರುಚಾಡಲು ಶುರು ಮಾಡಿದರು.

ರೇಂಜರ್​ ಸ್ವಿಂಗ್​ನಲ್ಲಿದ್ದವರು (Ranger Swing) ಕೂಗಿಕೊಳ್ಳಲು ಶುರು ಮಾಡುತ್ತಿದ್ದಂತೆ ನಿಖಿತಾ ತಾಯಿ ಗೀತಾ ನಿಲ್ಲಿಸುವಂತೆ ಹೇಳಿದ್ದಾರೆ. ಆದರೆ, ಗೀತಾ ಅವರ ಮಾತಿಗೆ ಆಪರೇಟರ್​ ಯಾವುದೇ ಬೆಲೆ ಕೊಟ್ಟಿಲ್ಲ. ಈ ವೇಳೆ ನಿಖಿತಾಗೆ ಹಾಕಿದ್ದ ಸೇಪ್ಟಿ ಬೆಲ್ಟ್ ಸಡಿಲಾಗಿ ಕಟ್ ಆಗಿದೆ. ಕೂಡಲೇ ಆಕೆ ಮೇಲಿಂದ ಕೆಳಗೆ ಬಿದ್ದಿದ್ದು, ಕೂಡಲೇ ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.

ಘಟನೆ ಸಂಬಂಧ ಗಾಂಧಿ ಚೌಕ್​ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಎಕ್ಸ್​ಪೋ ಮ್ಯಾನೇಜರ್, ಆಪರೇಟರ್, ಕ್ಯಾಷಿಯರ್ ಸೇರಿದಂತೆ ಒಟ್ಟು ಐದು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.