ತೇರದಾಳ: ಯರಗಟ್ಟಿ ಗ್ರಾಮದ ಲಕ್ಷ್ಮಣ ಬಸಪ್ಪ ಕೊರವ (16) ಎಂಬ ಯುವಕನನ್ನು ಅಪಹರಣ ಮಾಡಿದ್ದಾರೆಂದು ಆತನ ತಾಯಿ ರೇಣುಕಾ ಕೊರವ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಏ.3ರಂದು ಬೆಳಗ್ಗೆ 6ಗಂಟೆಗೆ ತೇರದಾಳ ಅಂಬೇಡ್ಕರ್ ವೃತ್ತದಿಂದ ಚಿಕ್ಕೋಡಿ ತಾಲೂಕಿನ ನೇಜ ಗ್ರಾಮಕ್ಕೆ ಹೋಗುವಾಗ ಅಪಹರಣ ಮಾಡಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ. ಪಿಎಸ್‌ಐ ಅಪ್ಪಣ್ಣ ಐಗಳಿ ತನಿಖೆ ಕೈಗೊಂಡಿದ್ದಾರೆ.