ಹುಕ್ಕೇರಿಯ ಎಸ್‌ಎಸ್‌ಎನ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕಲ್ಪತರು ಕರುನಾಡ ಹಬ್ಬದ ಮೆರವಣಿಗೆಗೆ ಕಸಾಪ ತಾಲೂಕಾಧ್ಯಕ್ಷ ಪ್ರಕಾಶ ಅವಲಕ್ಕಿ ಚಾಲನೆ ನೀಡಿದರು. ಎಸ್.ಆರ್.ಶೆಟ್ಟಿ, ಡಾ.ಸರ್ವಮಂಗಳಾ ಕಮತಗಿ, ಬಿ.ಎಸ್.ಪಾಟೀಲ, ಬಾಬು ಸುಂಕದ ಮತ್ತಿತರರಿದ್ದರು. 
ಜಿಲ್ಲೆ

ಯುವಸಮೂಹ ಕನ್ನಡ ಉಳಿಸಲಿ

ಪ್ರಶಾಂತ ಹೂಗಾರ

ಹುಕ್ಕೇರಿ: ಕನ್ನಡ ಭಾಷೆ ಎರಡು ಸಾವಿರ ವರ್ಷ ಹಳೆಯದಾಗಿದ್ದು, ಜ್ಞಾನಪೀಠ ಪ್ರಶಸ್ತಿ ಪಡೆದವರ ಸಾಲಿನಲ್ಲಿ ಬಹುಪಾಲು ಕನ್ನಡಿಗರಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಪ್ರಕಾಶ ಅವಲಕ್ಕಿ ಹೇಳಿದರು.

ಸ್ಥಳೀಯ ಎಸ್‌ಎಸ್‌ಎನ್ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಲ್ಪತರು ಕರುನಾಡ ಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೇರೆ ಭಾಷಿಕರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿಲ್ಲ. ಇದರಿಂದ ಅನ್ಯ ಭಾಷಿಕರ ದಬ್ಬಾಳಿಕೆ ಹೆಚ್ಚಾಗಿದೆ. ಅದಕ್ಕಾಗಿ ಯುವಸಮೂಹ ಕನ್ನಡ ಉಳಿಸಿ, ಬೆಳೆಸಲು ಶ್ರಮಿಸಬೇಕೆಂದರು.

ಸಿ.ಎಸ್.ತುಬಚಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್.ಆರ್.ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಭಾಷೆ ಪ್ರೀತಿಸಿ. ಆದರೆ, ಬೇರೆ ಭಾಷೆ ಗೌರವಿಸಿ ಎಂದು ಸಲಹೆ ನೀಡಿದರು. ಕಾಲೇಜಿನಿಂದ ಕೋರ್ಟ್ ವೃತ್ತದ ಮೂಲದ ವಿದ್ಯಾರ್ಥಿಗಳು ಘೋಷಣೆ ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು. ಅತಿಥಿಗಳನ್ನು ಸತ್ಕರಿಸಿದರು. ಕಸಾಪದಿಂದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿದರು.

ಪ್ರಾಚಾರ್ಯೆ ಡಾ.ಸರ್ವಮಂಗಳಾ ಕಮತಗಿ, ಕನ್ನಡ ಉಪನ್ಯಾಸಕ ಸೋಮಶೇಖರಪ್ಪ ಎಚ್., ಬಿ.ಎಸ್.ಪಾಟೀಲ, ಪತ್ರಕರ್ತ ಬಾಬು ಸುಂಕದ ಮತ್ತಿತರರಿದ್ದರು. ಅನುಜಾ ಮಗದುಮ್ಮ ಸ್ವಾಗತಿಸಿ, ಪರಿಚಯಿಸಿದರು. ಸಿದ್ದು ಬಾಗಿ ಮತ್ತು ಅಮಿತಾ ಮುತಾಲಿಕ್ ನಿರೂಪಿಸಿದರು. ವಿಭಾ ಚೌಗಲಾ ವಂದಿಸಿದರು.