ದೊಡ್ಡಬಳ್ಳಾಪುರ: ಸಾಸಲು ಹೋಬಳಿಯ ಬನವತಿ ಗ್ರಾಮದಲ್ಲಿ ಭಾನುವಾರ ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಾಡಲು ಹೋಗಿ, ಉಸಿರುಗಟ್ಟಿ ಯುವಕನೊಬ್ಬ ಮೃತಪಟ್ಟಿದ್ದಾನೆ.
ಆರೂಢಿ ಗ್ರಾಮದ ನರಸಿಂಹರಾಜು(22) ಮೃತ ಯುವಕ. ಮಧ್ಯಾಹ್ನ 2.30ರ ವೇಳೆಗೆ ಸ್ನೇಹಿತರ ಜತೆಗೂಡಿ ನರಸಿಂಹರಾಜು ಎಂಬುವವರ ಬಾವಿಯಲ್ಲಿ ಈಜಾಡಲು ಹೋಗಿದ್ದರು. ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಶವ ಹೊರತೆಗೆದಿದ್ದಾರೆ. ಹೊಸಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ: ನಂಬರ್ ಪ್ಲೇಟ್ ನಕಲು ಪ್ರಕರಣ; ಅಂತರಾಜ್ಯ ಖದೀಮರ ಬಂಧನ
ಅರೂಢಿ ಗ್ರಾಮದ ನರಸಿಂಹಮೂರ್ತಿ ಹಾಗೂ ಮಂಜಮ್ಮ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದು, ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.
ದಂಪತಿಯ ಎರಡನೇ ಮಗ ಕಾರ್ತಿಕ್ ಕಳೆದ ವರ್ಷ ಬೈಕ್ ಅಪಘಾತ ಮೃತಪಟ್ಟಿದ್ದ. ಈಗ ಮೊದಲ ಮಗ ಕೂಡ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.