ಬೆಳಗಾವಿ: ರಕ್ತದಾನದಿಂದ ಹೃದಯಾಘಾತ ಸಮಸ್ಯೆ ನಿವಾರಣೆ ಸೇರಿದಂತೆ ಹತ್ತಾರು ಆರೋಗ್ಯ ಸಮಸ್ಯೆ ದೂರಾಗುತ್ತವೆ. ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರಿಗೆ ಜೀವದಾನ ಮಾಡಬೇಕು ಎಂದು ಡಾ. ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕಿಯ ಸಂಶೋಧನಾ ಕೇಂದ್ರದ ವೈದ್ಯ ಡಾ.ಬಸವರಾಜ ದೇವಿಗಿ ಕರೆ ನೀಡಿದರು.
ನಗರದ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ (ಸ್ವಾಯತ್ತ) ಮಹಾವಿದ್ಯಾಲಯದಲ್ಲಿ ಶನಿವಾರ ಎನ್ಎಸ್ಎಸ್, ವೈಆರ್ಸಿ ಮತ್ತು ಆರ್ಆರ್ಸಿ ವತಿಯಿಂದ ಸಂವೇದನಾ&2 ಅಡಿಯಲ್ಲಿ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಮತ್ತು ವೈದ್ಯಕಿಯ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಮಹಾವಿದ್ಯಾಲಯದ ಪ್ರಾಣಿಶಾಸ ವಿಭಾಗದಲ್ಲಿ ಭಗತ ಸಿಂಗ್, ರಾಜಗುರು, ಸುಖದೇವ ಅವರ 94ನೇ ಹುತಾತ್ಮ ದಿನದ ಪ್ರಯುಕ್ತ ಹಮ್ಮಿಕೊಳ್ಳಲಾದ ರಕ್ತದಾನ ಜಾಗೃತಿ ಮತ್ತು ರಕ್ತದಾನ ಶಿಬಿರ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿ ಅವರು ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಭಾರಿ ಪ್ರಾಚಾರ್ಯ ಎಸ್. ಡಿ. ಗೋರಿನಾಯಕ ಮಾತನಾಡಿ, ರಕ್ತದಾನ ಶ್ರೇಷ್ಠ ಕಾರ್ಯವಾಗಿದ್ದು, ಆರೋಗ್ಯವಂತ ಯುವಕರು ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಬೇಕು ಎಂದರು.
ಕೆಎಲ್ಇ ಬ್ಲಡ್ ಬ್ಯಾಂಕ್ನ ಮುಖ್ಯಸ್ಥ ಶ್ರೀಕಾಂತ ವೀರಗಿ, ರಾಜೇಶ ಮುರಕಿಬಾವಿ, ಎನ್ಎಸ್ಎಸ್ ಅಧಿಕಾರಿ ಮಹಾದೇವಿ ಹುಣಶೀಬೀಜ, ವೈಆರ್ಸಿ ಸಂಚಾಲಕ ಪವಿತ್ರಾ ಸಮಾಜೆ ಇತರರಿದ್ದರು.