ಜಿಲ್ಲೆ

ಕೆರೆಯಲ್ಲಿ ಮುಳಗಿ ಯುವಕ ಮರಣ

Gadag - Desk - Tippanna Avadoot

ರಾಣೆಬೆನ್ನೂರ: ಎತ್ತಿನ ಮೈ ತೊಳೆಯಲು ಹೋದ ವ್ಯಕ್ತಿಯೊಬ್ಬ ಕೆರೆಯಲ್ಲಿ ಮುಳಗಿ ಮೃತಪಟ್ಟ ಘಟನೆ ತಾಲೂಕಿನ ಹೊಸ ಹೊನ್ನತ್ತಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಪ್ರವೀಣ ದುರ್ಗಪ್ಪ ಮಡಿವಾಳರ (28) ಮೃತಪಟ್ಟವ. ಈತ ಎತ್ತುಗಳ ಮೈ ತೊಳೆಯಲು ಗ್ರಾಮದ ದೊಡ್ಡ ಕೆರೆಗೆ ಬಂದಾಗ ಕಾಲು ಜಾರಿ ನೀರಿನಲ್ಲಿ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.