ಸಾಂದರ್ಭಿಕ ಚಿತ್ರ 
ಜಿಲ್ಲೆ

ಹೊಸ ಮೊಬೈಲ್​ಫೋನ್​ ತರಲು ಹೋದವ ರಸ್ತೆಯಲ್ಲೇ ಪ್ರಾಣಬಿಟ್ಟ!, ದೇಹ ರಕ್ತಸಿಕ್ತ...

ಹಾವೇರಿ: ಹೊಸ ಮೊಬೈಲ್​ಫೋನ್ ತರಲೆಂದು ಹೊರಟಿದ್ದ ಯುವಕನೊಬ್ಬ ರಸ್ತೆಯಲ್ಲೇ ಪ್ರಾಣಬಿಡುವಂತಾಗಿದೆ. ಮೃತದೇಹ ಸಂಪೂರ್ಣ ರಕ್ತಸಿಕ್ತವಾಗಿ ದಾರುಣವಾಗಿ ಸಾವು ಕಂಡಂತಾಗಿದೆ. ಹಾವೇರಿ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ.

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಗಂಗಾಜಲ ತಾಂಡಾದ ಬಳಿ ಈ ಅವಘಡ ಸಂಭವಿಸಿದೆ. ಇದರಲ್ಲಿ ಗುಡ್ಡಪ್ಪ ಗುಡಗೇರಿ (30) ಎಂಬಾತ ಸಾವಿಗೀಡಾಗಿದ್ದಾನೆ. ಈತ ಇಲ್ಲಿನ ಬೇಲೂರು ಗ್ರಾಮದ ನಿವಾಸಿ.

ಅವಿವಾಹಿತನಾಗಿದ್ದ ಈತ ಹೊಸ ಮೊಬೈಲ್​ಫೋನ್​ ತರಬೇಕು ಎಂದು ರಾಣೆಬೆನ್ನೂರಿಗೆ ಹೋಗುತ್ತಿದ್ದಾಗ ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ಮೈಮೇಲೆ ಹರಿದುಹೋಗಿದೆ. ಪರಿಣಾಮವಾಗಿ ಯುವಕ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಸ್ಥಳಕ್ಕೆ ರಾಣೆಬೆನ್ನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.