ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮಾತನಾಡಿದರು. ಶಾಸಕ ಅನಿಲ ಬೆನಕೆ, ಅಭಯ ಪಾಟೀಲ ಇದ್ದರು. 
ಜಿಲ್ಲೆ

ಯುವಕರು ಆತ್ಮನಿರ್ಭರ ಭಾರತ ಸಂಕಲ್ಪ ಸಾಕಾರಗೊಳಿಸಲಿ

ಬೆಳಗಾವಿ: ಆತ್ಮನಿರ್ಭರ ಭಾರತ ಸಂಕಲ್ಪವನ್ನು ಯುವಕರು ಸಾಕಾರಗೊಳಿಸಬೇಕು ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಸಲಹೆ ನೀಡಿದ್ದಾರೆ.

ನಗರದ ಕಾಡಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕರೊನಾ ಬಿಕ್ಕಟ್ಟಿನಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಯಮಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದಾರೆ. ಅವರ ‘ಲೋಕಲ್ ಟು ಲೋಕಲ್, ಲೋಕಲ್ ಟು ಗ್ಲೋಬಲ್’ ಎನ್ನುವ ಉದ್ದೇಶ ಸಾಕಾರಗೊಳಿಸಲು ಯುವಕರು ಮುಂದಾಗಬೇಕು ಎಂದರು. ಭಾರತ ಈಗ ಕರೊನಾ ಹಾಗೂ ಆರ್ಥಿಕ ಸಂಕಷ್ಟದಲ್ಲಿದೆ. ಆದರೂ ಗ್ರಾಮ, ಬಡವ ಮತ್ತು ರೈತನನ್ನು ದೃಷ್ಟಿಯಲ್ಲಿರಿಸಿಕೊಂಡು 80 ಕೋಟಿ ಜನರಿಗೆ ಕರೊನಾ ಸಂಕಟದ ಸಮಯದಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ನೆರವು ಘೋಷಿಸಿದೆ. 70.32 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಿಸಿದ್ದು, ಬಡವರಿಗೆ ನೆರವಾಗುವ ಉದ್ದೇಶದಿಂದ ಉಚಿತ ಪಡಿತರ ವಿತರಿಸುತ್ತಿದೆ. ಸದುಪಯೋಗ ಮಾಡಿಕೊಳ್ಳಬೇಕು ಎಂದು ಸಚಿವ ಅಂಗಡಿ ಸಲಹೆ ನೀಡಿದರು. ಶಾಸಕ ಅನಿಲ ಬೆನಕೆ, ಅಭಯ ಪಾಟೀಲ ಇದ್ದರು.