ಪೆರ್ಲ: ಕೇಂದ್ರ ಬಜೆಟ್‌ನಲ್ಲಿ ಕೇರಳವನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿ, ಯುವ ಕಾಂಗ್ರೆಸ್ ಎಣ್ಮಕಜೆ ಮಂಡಲ ಸಮಿತಿ ವತಿಯಿಂದ ಇತ್ತೀಚೆಗೆ ಪ್ರತಿಭಟನೆ ನಡೆಯಿತು.
ಪೆರ್ಲ ಅಂಚೆ ಕಚೇರಿಯಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ, ಕೇರಳದ ನಕ್ಷೆಯನ್ನು ಕಳುಹಿಸುವ ಮೂಲಕ ‘ಕೇರಳ ಭಾರತದಲ್ಲಿದೆ ಮೇಡಂ’ ಎಂಬ ಸಂದೇಶ ನೀಡಲಾಯಿತು.
ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆ.ಎಸ್ ಪ್ರತಿಭಟನೆ ಉದ್ಘಾಟಿಸಿದರು. ಎಣ್ಮಕಜೆ ಮಂಡಲ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪಿ.ಎಂ ಅಧ್ಯಕ್ಷತೆ ವಹಿಸಿದರು.
ಬಾಲಕೃಷ್ಣ ಕುಲಾಲ್ ನಲ್ಕ, ಶರೀಫ್ ಪೆರ್ಲ, ಆಸಿಫ್ ಬಣ್ಪುತ್ತಡ್ಕ ಮಾತನಾಡಿದರು. ಯುವ ಕಾಂಗ್ರೆಸ್ ಮಂಡಲದ ಪ್ರಧಾನ ಕಾರ್ಯದರ್ಶಿ ಹನೀಫ್ ಕಾಟುಕುಕ್ಕೆ ಸ್ವಾಗತಿಸಿದರು. ಯುವ ಕಾಂಗ್ರೆಸ್ ಮಂಡಲ ಕಾರ್ಯದರ್ಶಿ ಜಬ್ಬಾರ್ ನಲ್ಕ ವಂದಿಸಿದರು.