ಜಿಲ್ಲೆ

ದಾವಣಗೆರೆಯಲ್ಲಿ ಯುವ ಸಮಾವೇಶ ಜ. 12ಕ್ಕೆ

Chitradurga

ಚಿತ್ರದುರ್ಗ: ದಾವಣಗೆರೆಯ ಮೋತಿವೀರಪ್ಪ ಕಾಲೇಜು ಮೈದಾನದಲ್ಲಿ ಜ. 12 ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಯುವ ಸಮಾವೇಶ ನಡೆಸಲಾಗುವುದು ಎಂದು ಕೆಆರ್‌ಎಸ್ ಪಕ್ಷದ ಜಿಲ್ಲಾ ಸಂಚಾಲಕ ಮಹೇಶ್ ಸಿ.ನಗರಂಗೆರೆ ತಿಳಿಸಿದರು.

ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷ ರವಿ ಕೃಷ್ಣರೆಡ್ಡಿ ಪ್ರಣಾಳಿಕೆ ಬಿಡುಗಡೆಗೊಳಿಸುವರು. ಯುವ ಘಟಕದ ರಾಜ್ಯಾಧ್ಯಕ್ಷ ರಘು ಜಾಣಗೆರೆ ಪಾಲ್ಗೊಳ್ಳುವರು. ಸ್ವಾಮಿ ವಿವೇಕಾನಂದರ ಆಶಯದಂತೆ ಯುವ ಸಮೂಹವನ್ನು ದುಶ್ಚಟದಿಂದ ದೂರವಿರುವಂತೆ ಜಾಗೃತಿ ಮೂಡಿಸುವುದು ಸಮಾವೇಶದ ಮುಖ್ಯ ಉದ್ದೇಶ ಎಂದರು.

ಬೇಡರೆಡ್ಡಿಹಳ್ಳಿ ನಾಗಿರೆಡ್ಡಿ, ಸಿದ್ರಾಮಪ್ಪ ಇದ್ದರು.