ಮಂಗಳೂರು: ತನ್ನನ್ನು ಪ್ರೀತಿಸುವ ನಾಟಕವಾಡಿ, ದೈಹಿಕ ಸಂಬಂಧ ಬೆಳೆಸಿ ಸಿ ಐ ಎಸ್ ಎಫ್ ಮಹಿಳಾ ಅಧಿಕಾರಿ ಮೋಸ ಮಾಡಿದ್ದಾಳೆ ಎಂದು ಆರೋಪಿಸಿ ಉತ್ತರ ಪ್ರದೇಶ ಮೂಲದ ಯುವಕ ಮಂಗಳೂರಿನಲ್ಲಿ ಲಾಡ್ಜ್‌ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಉತ್ತರ ಪ್ರದೇಶದ ಗಾಜಿಪುರ ನಿವಾಸಿ, ಚೆನ್ನೈನಲ್ಲಿ ಖಾಸಗಿ ಸಂಸ್ಥೆಯೊಂದರ ಉದ್ಯೋಗಿಯಾಗಿದ್ದ ಅಭಿಷೇಕ್ ಸಿಂಗ್ (40) ಎಂಬಾತ ಮಂಗಳೂರಿನ ರಾವ್ ಅಂಡ್ ರಾವ್ ಸರ್ಕಲ್‌ನಲ್ಲಿರುವ ಲಾಡ್ಜ್ ಒಂದರಲ್ಲಿ ಎರಡು ದಿನಗಳ ಹಿಂದೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಂಗಳೂರಿನಲ್ಲಿ ಸಭಾಂಗಣವೊಂದರಲ್ಲಿ ನಡೆಯುತ್ತಿರುವ ಹ್ಯಾಂಡ್‌ಲೂಮ್ ಮತ್ತು ಹ್ಯಾಂಡಿಕ್ರ್‌ಟಾ ಪ್ರದರ್ಶನದಲ್ಲಿ ಭಾಗವಹಿಸಲು ನಾಲ್ಕೈದು ದಿನಗಳ ಹಿಂದೆ ಬಂದಿದ್ದ ಆತ ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ. ಮಾ. 1ರಂದು ಮಧ್ಯಾಹ್ನ 3.45ರ ವೇಳೆಗೆ ಆತ ಇನ್‌ಸ್ಟಾಗ್ರಾಮ್‌ನಲ್ಲಿ 20 ನಿಮಿಷಗಳ ಲೈವ್ ವಿಡಿಯೋ ಮಾಡಿದ್ದು ತನ್ನ ಸಾವಿಗೆ ಸಿಐಎಸ್‌ಎ್ ಅಧಿಕಾರಿಯಾಗಿರುವ ಹರ್ಯಾಣ ಮೂಲದ ಮೋನಿಕಾ ಸಿಹಾಗ್ ಎಂಬಾಕೆ ಕಾರಣ. ಆಕೆ ತನಗೆ ಮೋಸ ಮಾಡಿದ್ದಾನೆ ಎಂದು ವೀಡಿಯೋದಲ್ಲಿ ಹೇಳಿಕೊಂಡಿದ್ದಾನೆ. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದು, ತಾನು ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರವನ್ನು ಕುಟುಂಬದವರಿಗೆ ತಿಳಿಸಿ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.
ಒಂದೂವರೆ ವರ್ಷಗಳ ಹಿಂದೆ ಜಾಲತಾಣದಲ್ಲಿ ್ರೆಂಡ್ ಆಗಿದ್ದ ಆಕೆಯೊಡನೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದೆ. ಚೆನ್ನೈ- ಹೈದರಾಬಾದ್‌ನಲ್ಲಿ ಆಕೆ ಕರ್ತವ್ಯ ನಿರ್ವಹಿಸುತ್ತಿದ್ದಳು. ಮೊದಲು ಆಕೆಗೆ ಮದುವೆಯಾಗಿರುವುದನ್ನು ಮುಚ್ಚಿಟ್ಟಿದ್ದಳು. ಅನಂತರ, ಮದುವೆ ಆಗಿರುವುದು ಮತ್ತು ಮಗು ಇರುವುದು ತಿಳಿದುಬಂದಿತ್ತು. ಆದರೆ ಆಗ ತನ್ನ ಗಂಡ ಸರಿ ಇಲ್ಲ, ನಿನ್ನನ್ನೇ ಮದುವೆಯಾಗುತ್ತೇನೆಂದು ಹೇಳಿ ನಂಬಿಸಿದ್ದಳು. ಬಳಿಕ ನಾವು ಲಿವಿಂಗ್ ರಿಲೇಶನ್ ಹೊಂದಿದ್ದೆವು. ಈ ವೇಳೆ ದೈಹಿಕ ಸುಖ, ಆರ್ಥಿಕ ಲಾಭ ಪಡೆದು ಮೋಸ ಮಾಡಿದ್ದಾಳೆ.ಆಕೆ ಹಲವರ ಜೊತೆಗೆ ಇದೇ ರೀತಿಯ ಸಂಬಂಧ ಇಟ್ಟುಕೊಂಡಿರುವುದು ತಿಳಿದುಬಂದಿದೆ ಎಂದು ಆತ ವೀಡಿಯೋದಲ್ಲಿ ಆರೋಪಿಸಿದ್ದಾನೆ.
ಮೋನಿಕಾಗೆ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ತೆಗೆದುಕೊಟ್ಟಿದ್ದೇನೆ. ಆದರೆ ಆಕೆ ನನ್ನ ಮುಗ್ಧ ಪ್ರೀತಿಯನ್ನು ಬದಿಗೊತ್ತಿ ಮೋಸ ಮಾಡಿದ್ದಾಳೆ. ಆಕೆಯನ್ನು ಹಾಗೆಯೇ ಬಿಡಬಾರದು. ಮೋನಿಕಾ ಸಿಂಗ್, ಗುಜರಾತಿನ ಅಹ್ಮದಾಬಾದ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಳೆ ಎಂದೂ ಕೂಡಾ ಆತ ಹೇಳಿಕೊಂಡಿದ್ದಾನೆ.
ಮಹಿಳೆಯಿಂದ ಮೋಸ ಹೋಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಯುವಕನ ವಿಡಿಯೋ ಹೇಳಿಕೆಗಳಿಂದ ಗೊತ್ತಾಗಿದೆ. ಆಕೆಗೆ ಯುವಕನ ಜತೆಗೆ ಸಂಬಂಧವಿತ್ತು. ವೈವಾಹಿಕ ಜೀವನದ ಬಗ್ಗೆ ಸುಳ್ಳು ಹೇಳಿ, ಮದುವೆ ಆಗಿರುವ ಬಗ್ಗೆ ತಿಳಿಸದೆ ಪ್ರೀತಿಯ ನೆಪದಲ್ಲಿ 10-15 ಲಕ್ಷ ರೂ. ಮೊತ್ತದ ಚಿನ್ನ ಹಾಗೂ ಇತರ ವಸ್ತುಗಳನ್ನು ಆತನಿಂದ ಪಡೆದುಕೊಂಡಿದ್ದಾಳೆ. ಆತ್ಮಹತ್ಯೆಗೆ ಮಾಡಿಕೊಂಡಿರುವ ಯುವಕನ ಸಹೋದರ ರಾಹುಲ್ ಸಿಂಗ್ ಮಂಗಳೂರಿಗೆ ಬಂದು ಯುವತಿಯ ವಿರುದ್ಧ ದೂರು ನೀಡಿದ್ದು, ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
- ಅನುಪಮ್ ಅಗರ್ವಾಲ್
ಮಂಗಳೂರು ನಗರ ಪೊಲೀಸ್ ಆಯುಕ್ತ
========================