ಜಿಲ್ಲೆ

ಎತ್ತಿನ ಮೈ ತೊಳೆಯಲು ಹೋದ ಯುವಕ ನೀರಿನಲ್ಲಿ ಮುಳಗಿ ಸಾವು

Haveri - Kariyappa Aralikatti

ರಾಣೆಬೆನ್ನೂರ: ಯುಟಿಪಿ ಕಾಲುವೆಯಲ್ಲಿ ಎತ್ತಿನ ಮೈ ತೊಳೆಯಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳಗಿ ಮೃತಪಟ್ಟ ಘಟನೆ ತಾಲೂಕಿನ ವೈ.ಟಿ. ಹೊನ್ನತ್ತಿ ಗ್ರಾಮದಲ್ಲಿ ಶುಕ್ರವಾರ ಸಂಭವಿಸಿದೆ.
ಹನುಮಂತಪ್ಪ ನಾಗಪ್ಪ ಬನ್ನಿಹಟ್ಟಿ (18) ಮೃತ ಯುವಕ.
ಈತ ಕಾಲುವೆ ನೀರಿನಲ್ಲಿ ಎತ್ತಿನ ಮೈ ತೊಳೆಯಲು ಹೋದಾಗ ಎತ್ತುಗಳು ನೀರಿನಲ್ಲಿ ಹೋಗಿವೆ. ಆಗ ಅವುಗಳನ್ನು ಹಿಡಿಯಲು ಹೋದ ಈತ ನೀರಿನಲ್ಲಿ ಮುಳಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.