ಯೂತ್ ಅಸೋಸಿಯೇಷನ್ ಕರ್ಮಾರ್ ರಜತ ಸಂಭ್ರಮದಲ್ಲಿ ಪರಿಸರದ 25 ಸ್ವಾಭಿಮಾನಿ ಶ್ರಮಿಕರನ್ನು ಸನ್ಮಾನಿಸಲಾಯಿತು. ಶಾಸಕ ವೇದವ್ಯಾಸ ಕಾಮತ್, ಪ್ರಮುಖರಾದ ಪಿ.ಎಸ್ ಪ್ರಕಾಶ್, ಗುರೂಜಿ ಉಮೇಶ್ ಆಚಾರ್ಯ ಕಣ್ಣೂರು, ವಿಜಯ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. 
ಜಿಲ್ಲೆ

ಯೂತ್ ಅಸೋಸಿಯೇಷನ್ ಕರ್ಮಾರ್ ರಜತ ಸಂಭ್ರಮ, ಸಾಮೂಹಿಕ ಅಷ್ಟೋತ್ತರ ಸಹಿತ ರುದ್ರಾಭಿಷೇಕ, 25 ಸ್ವಾಭಿಮಾನಿ ಶ್ರಮಿಕರಿಗೆ ಗೌರವ

Mangaluru - Shravan Kumar Nala

ಮಂಗಳೂರು: ಯೂತ್ ಅಸೋಸಿಯೇಷನ್ ಕರ್ಮಾರ್ ಇದರ ರಜತ ಸಂಭ್ರಮ ಇತ್ತೀಚೆಗೆ ಶ್ರೀ ಮಹಾದೇವಿ ಭಜನಾ ಮಂದಿರದ ಬಳಿ ಶ್ರೀಮದ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ್ವರ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಿತು.

ಅಂತಾರಾಷ್ಟ್ರೀಯ ವಾಸ್ತುಶಿಲ್ಪಿ ಜ್ಯೋತಿಷಿ ಗುರೂಜಿ ಉಮೇಶ್ ಆಚಾರ್ಯ ಪಡೀಲ್ ಕಣ್ಣೂರು, ಸುಳ್ಯ ನಾಗರಾಜ ಭಟ್ ಪೌರೋಹಿತ್ಯದಲ್ಲಿ ಸಾಮೂಹಿಕ ಅಷ್ಟೋತ್ತರ ಸಹಿತ ರುದ್ರಾಭಿಷೇಕ ಪರಸ್ಪರ ಪಂಚಬ್ರಹ್ಮಾರ್ತಕ ಶ್ರೀ ಸಾಂಬ ಸದಾಶಿವ ಚಂದ್ರಮೌಳೀಶ್ವರ ಆರಾಧನೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ರಜತ ಸಂಭ್ರಮ ಅಂಗವಾಗಿ 1ರಿಂದ 10 ವರ್ಷದ ಮಕ್ಕಳಿಗೆ ತುಳುನಾಡಿನ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಹುಲಿ ಸ್ಪರ್ಧೆ, 25 ಸ್ವಾಭಿಮಾನಿ ಶ್ರಮಿಕರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಸಭಾ ಕಾರ್ಯಕ್ರಮದಲ್ಲಿ ಗುರೂಜಿ ಉಮೇಶ್ ಆಚಾರ್ಯ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು. ಆರೆಸ್ಸೆಸ್ ಪ್ರಾಂತೀಯ ಸಹ ಕಾರ್ಯವಾಹ ಪ್ರಕಾಶ್ ಪಿ.ಎಸ್., ಶಾಸಕ ಡಿ.ವೇದವ್ಯಾಸ ಕಾಮತ್, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಬಿಜೆಪಿ ದಕ್ಷಿಣ ಮಂಡಲ ಧ್ಯಕ್ಷ ವಿಜಯ ಕುಮಾರ್ ಶೆಟ್ಟಿ, ಕಾರ್ಪೊರೇಟರ್ ಶೋಭಾ ಪೂಜಾರಿ, ಉದ್ಯಮಿಗಳಾದ ಉಮೇಶ್ ಶೆಟ್ಟಿ ಬಡಗಬೆಳ್ಳೂರು ದೇವಸ್ಯ, ದೇವಿಪ್ರಸಾದ್ ಶೆಟ್ಟಿ ಜಲ್ಲಿಗುಡ್ಡೆ, ವಿಶ್ವನಾಥ ಬಲ್ಯಾಯ, ಪ್ರಕಾಶ್ ಅಂಚನ್, ದೀಪಕ್ ಎಸ್.ಪಿ, ಕರ್ಮಾರ್ ಸತ್ಸಂಗ ಸಮಿತಿಯ ವಾಸುದೇವ ಕೊಟ್ಟಾರಿ, ಅಳಪೆ ಕರ್ಮಾರ್ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಜಗದೀಶ್ ಕೊಟ್ಟಾರಿ, ಅಳಪೆ ಅಶೋಕ್ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಗಣೇಶ್ ಕೆ.ಟಿ., ಕ್ಲಬ್ ಅಧ್ಯಕ್ಷ ತಾರಾನಾಥ ಕರ್ಮಾರ್. ಕಾರ್ಯದರ್ಶಿ ನಿತಿನ್ ಎ., ಖಜಾಂಚಿ ಸಾಯಿನಾಥ್ ಸೆಲ್ಲರಾಜ್, ಪ್ರಮುಖರಾದ ಹರೀಶ್ ಅಂಚನ್, ಮಕೇಶ್ ಆಚಾರ್ಯ, ನಾಗರಾಜ್ ಕೆ, ವಸಂತ ಕೊಟ್ಟಾರಿ, ರೋಹಿದಾಸ್, ರತ್ನಾಕರ, ಜಗದೀಶ್, ನಾಗರಾಜ್ ಟಿ, ಪ್ರವೀಣ್ ಕೊಟ್ಟಾರಿ, ಲಕ್ಷ್ಮೀಶ ಮೊದಲಾದವರು ಉಪಸ್ಥಿತರಿದ್ದರು. ಆರ್‌ಜೆ ಅಭಿಷೇಕ್ ಕಾರ್ಯಕ್ರಮ ನಿರೂಪಿಸಿ ಭರತ್ ಕುಮಾರ್ ವಂದಿಸಿದರು.