ಜಿಲ್ಲೆ

ನವಯುವಕ ಕಲಾವೃಂದ, ಗ್ರಂಥಾಲಯ ವಾರ್ಷಿಕೋತ್ಸವ

ಸೌಮ್ಯ ಆರ್

ಮಂಜೇಶ್ವರ: ಕುಳೂರು ಚಿನಾಲದ ನವಯುವಕ ಕಲಾವೃಂದ ಮತ್ತು ಗ್ರಂಥಾಲಯದ 60ನೇ ವಾರ್ಷಿಕೋತ್ಸವ ಭಾನುವಾರ ನಡೆಯಿತು.

ಕೆ.ಯೋಗೀಶ ಕಲ್ಯಾಣತ್ತಾಯ ಕಾರ್ಯಕ್ರಮ ಉದ್ಘಾಟಿಸಿದರು. ಮೋನಪ್ಪ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಲೈಬ್ರರಿ ಕೌನ್ಸಿಲ್ ಕಾರ್ಯದರ್ಶಿ ಡಿ.ಕಮಲಾಕ್ಷ, ಪ್ರಭಾಕರ ಶೆಟ್ಟಿ, ಮಿಂಜ ಗ್ರಾಪಂ ಆರೋಗ್ಯ, ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಸರಸ್ವತಿ, ಸದಸ್ಯರಾದ ಇ.ಜನಾರ್ದನ ಪೂಜಾರಿ, ಮೊಹಮ್ಮದ್ ಕುಂಞಿ ಚೀನಾಲ, ಬಸವರಾಜ್, ಲೋಕೇಶ್ ಚೀನಾಲ ಮೊದಲಾದವರಿದ್ದರು.

ಬಳಿಕ ಬಾಲವೇದಿ, ಮಹಿಳಾ ವಿಭಾಗದವರಿಂದ ವಿವಿಧ ರೀತಿಯ ನೃತ್ಯ ಹಾಗೂ ನಾಟಕ ಪ್ರದರ್ಶನ ನಡೆಯಿತು. ನಂತರ ಕ್ಲಬ್‌ನ ಸದಸ್ಯರಿಂದ ಕಡೀರ ಮಗೆ ನಾಟಕ ಪ್ರದರ್ಶನಗೊಂಡಿತು. ಅವಿನಾಶ್ ಸ್ವಾಗತಿಸಿದರು. ಉದಯ ಸಿ.ಎಚ್. ವರದಿ ಮಂಡಿಸಿದರು. ರವೀಂದ್ರ ಭಂಡಾರಿ ನಿರೂಪಿಸಿದರು. ಸಂದೀಪ್ ವಂದಿಸಿದರು.