ಜಿಲ್ಲೆ

ವ್ಹೀಲಿಂಗ್ ಮಾಡುತ್ತಿದ್ದವ ಬಂಧನ

ಗಂಗಾಧರ ಬಿ ವಿ
ಬಿಡದಿ: ಬೆಂಗಳೂರು- ಮೈಸೂರು ದಶಪಥ ಹೆದ್ದಾರಿಯ ಸರ್ವಿಸ್ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ ಆರೋ‍ಪದಡಿ ಓರ್ವ ಯುವಕನನ್ನ ಬಿಡದಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.
ಸರ್ವಿಸ್ ರಸ್ತೆಯ ಅವರಗೆರೆ ಗ್ರಾಮದ ಬಳಿ ಬಿಡದಿ ನಿವಾಸಿ ಜೀವನ್ ಕುಮಾರ್ ( 18) ಡಿಯೋ ಸ್ಕೂಟರ್ ನಲ್ಲಿ ಅಪಾಯಕಾರಿ ರೀತಿಯಲ್ಲಿ ಬೈಕ್ ವ್ಹೀಲಿಂಗ್ ಮಾಡುತ್ತಿದ್ದ. ಆರೋಪಿಯು ವೀಲಿಂಗ್ ಮಾಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು.
ವಿಡಿಯೋ ಆಧರಿಸಿ ಪೊಲೀಸರು ಕ್ರಮಕೈಗೊಂಡು ಶುಕ್ರವಾರ ಜೀವನ್ ಕುಮಾರ್ ನನ್ನ ವಶಕ್ಕೆ ಪಡೆದು ವೀಲಿಂಗ್ ಮಾಡಲು ಬಳಸಿದ್ದ ಕೆಎ.01-ಜೆಡಿ- 1092 ನಂಬರ್ ನ ಡಿಯೋ ಸ್ಕೂಟರ್ ಅನ್ನ ಜಪ್ತಿ ಮಾಡಲಾಗಿದೆ. ಇದರ ಜೊತೆಗೆ ಸ್ಕೂಟರ್ ಮಾಲೀಕರಾದ ಲೀಲಾ ಅವರ ವಿರುದ್ದ ಕೂಡ ಪ್ರಕರಣ ದಾಖಲು ಮಾಡಲಾಗಿದೆ.