ಮಂಗಳೂರು: ನಗರದ ಕೆ ಎಸ್ ರಾವ್ ರಸ್ತೆಯ ಅಂಗಡಿಗಳ ಬಾಗಿಲು ಮುರಿದು ಕಳವಿಗೆ ಹೊಂಚು ಹಾಕುತ್ತಿದ್ದ ಯುವಕನೊಬ್ಬನನ್ನು ಬಂದರು ಪೊಲೀಸರು ಬಂಧಿಸಿದ್ದಾರೆ.
ಕುಂದಾಪುರ ಸಾಸ್ತಾನ ನಿವಾಸಿ ಪ್ರಹ್ಲಾದ್ ಪೂಜಾರಿ (29) ಬಂಧಿತ ಆರೋಪಿ.
ಆ.5ರಂದು ಬೆಳಗ್ಗೆ 5.15ರ ಸುಮಾರಿಗೆ ಬಂದರು ಠಾಣೆಯ ಸಹಾಯಕ ಪೊಲೀಸ್ ಉಪನಿರೀಕ್ಷಕರಾದ ದಾಮೋದರ್ ಅವರು ರಾತ್ರಿ ಗಸ್ತಿನಲ್ಲಿದ್ದಾಗ ನಗರದ ಕೆ.ಎಸ್.ರಾವ್ ರಸ್ತೆಯಲ್ಲಿ ಆರೋಪಿ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದ. ಕೂಡಲೇ ಆತನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಅಂಗಡಿಗಳ ಬಾಗಿಲ ಬೀಗ ಮುರಿಯಲು ಹೊಂಚು ಹಾಕುತ್ತಿದ್ದ ಮಾಹಿತಿ ಲಭಿಸಿದೆ.
ಆರೋಪಿ ವಿರುದ್ಧ ಬಂದರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.