ಕುಂದಾಪುರ: ಸಮಾಜಮುಖಿ ಕಾರ್ಯಕ್ರಮಗಳಗೆ ಒಲವು ತೋರಿಸಲು, ಯುವ ಸಮುದಾಯ ಸಾಮಾಜಿಕ ಮೌಲ್ಯಗಳನ್ನು ಹೊಂದಿರುವ ಸಂ-ಸಂಸ್ಥೆಗಳ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಯುವ ಮಿತ್ರವೃಂದ ಅಧ್ಯಕ್ಷ ಅಮರ್ ಕುವಾರ್ ಹೇಳಿದರು.
ಯುವ ಮಿತ್ರ ವೃಂದದ ವಾರ್ಷಿಕ ಮಹಾಸಭೆಯಲ್ಲಿ, ಸವಾಜ ಸೇವಕ ಸೂರಿ ಅವರ ಮೋಕ್ಷ ಸಂಸ್ಥೆಗೆ 50 ಸಾವಿರ ರೂ. ವೆಚ್ಚದ ಆಮ್ಲಜನಕ ಉಪಕರಣ ಉಚಿತವಾಗಿ ನೀಡಿ ಮಾತನಾಡಿದರು.
ಒಂಬತ್ತು ದಂಡಿಗೆ ಶ್ರೀ ಚಿಕ್ಕಮ್ಮದೇವಿ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ನಾಗರಾಜ ಕಾಮಧೇನು ಮಾತನಾಡಿದರು. ಲೆಕ್ಕ ಪರಿಶೋಧಕ ಕಿರಣ್ ಕುವಾರ್, ಮಹಿಳಾ ಮಂಡಳಿ ಅಧ್ಯಕ್ಷೆ ಪ್ರಭಾವತಿ ಕೇಶವ, ಯುವ ಮಿತ್ರ ವೃಂದದ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯರು ಇದ್ದರು.