ರಾಣೆಬೆನ್ನೂರ: ನಸಿರ್ಂಗ್ ಓದುತ್ತಿದ್ದ ವಿದ್ಯಾಥಿರ್ನಿಯೊಬ್ಬಳಿಗೆ ಪ್ರೀತಿಸು ಎಂದು ಪೀಡಿಸಿ ಆಕೆಯ ಮೇಲೆ ಮೂವರು ಯುವಕರು ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ಮಂಗಳವಾರ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ರಟ್ಟಿಹಳ್ಳಿ ತಾಲೂಕಿನ ಗಲಗಿನಕಟ್ಟೆ ಗ್ರಾಮದ ಪವನ ಲಕ್ಷ$್ಮಪ್ಪ ಕರೇಗೌಡರ, ಹಿರೇಕಬ್ಬಾರ ಗ್ರಾಮದ ಅಭಿಷೇಕ ರಾಮಪ್ಪ ಬೈರೋಳ, ಶಿವಮೊಗ್ಗ ಜಿಲ್ಲೆ ಚಿಕ್ಕಕೂಡ್ಲಿ ಗ್ರಾಮದ ಕಾತಿರ್ಕ್ ಹಾಲೇಶಪ್ಪ ಪೂಜಾರ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿದ್ಯಾಥಿರ್ನಿಯೂ ಬಸ್ನಲ್ಲಿ ಬರುತ್ತಿದ್ದ ಸಮಯದಲ್ಲಿ ಪವನ ಎಂಬುವನು ಆಕೆಯ ಹಿಂದೆ ಬಿದ್ದು ಪ್ರೀತಿಸು ಎಂದು ಪೀಡಿಸುತ್ತಿದ್ದ. ಇದಕ್ಕೆ ವಿದ್ಯಾಥಿರ್ನಿ ನಿರಾಕರಿಸಿದ್ದರಿಂದ ತನ್ನ ಸ್ನೇಹಿತರಾದ ಅಭಿಷೇಕ ಹಾಗೂ ಕಾತಿರ್ಕನನ್ನು ಕರೆದುಕೊಂಡು ವಿದ್ಯಾಥಿರ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.