ಜಿಲ್ಲೆ

ಯುವತಿ ನಾಪತ್ತೆ, ಯುವಕನ ಬಂಧನ

ನ್ಯಾಮತಿ: ಅಪ್ರಾಪ್ತ ಯುವತಿಯನ್ನ್ನು ಅಪಹರಣ ಮಾಡಲಾಗಿದೆ ಎಂದು ಕುಟುಂಬಸ್ಥರು ನೀಡಿದ ದೂರಿನನ್ವಯ ಪವನ ಎಂಬಾತನನ್ನ್ನು ನ್ಯಾಮತಿ ಪೊಲೀಸರು ಗುರುವಾರ ಬಂಧಿಸಿ, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.

9ನೇ ತರಗತಿ ಓದುತ್ತಿರುವ ಅಪ್ರಾಪ್ತೆ ಯುವತಿ ಹಾಗೂ ಕೃಷಿ ಕೆಲಸ ಮಾಡುತ್ತಿದ್ದ 23 ವರ್ಷದ ಪವನ ಒಂದೇ ಊರಿನವರಾಗಿದ್ದು, ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಈಚೆಗೆ ಅಪ್ರಾಪ್ತೆ ನಾಪತ್ತೆಯಾಗಿದ್ದು, ಯುವಕ ಪುಸಲಾಯಿಸಿ ಬೇರೆಡೆ ಕರೆದುಕೊಂಡು ಹೋಗಿದ್ದಾನೆ ಎಂದು ಯುವತಿ ಕುಟುಂಬಸ್ಥರು ನ್ಯಾಮತಿ ಠಾಣೆಯಲ್ಲಿ ದೂರು ನೀಡಿದ್ದರು.

ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ನ್ಯಾಮತಿ ಪೊಲೀಸರು ಭದ್ರಾವತಿಯಲ್ಲಿದ್ದ ಅವರನ್ನು ಬಂಧಿಸಿ ಗುರುವಾರ ನ್ಯಾಮತಿಗೆ ಕರೆತಂದಿದ್ದಾರೆ. ಅಲ್ಲದೆ, ಕಾಣೆಯಾಗಲು ಸಹಕಾರ ನೀಡಿದ ಯುವಕನ ಇತರೆ ಮೂವರು ಸ್ನೇಹಿತರು ಕಾಣೆಯಾಗಿದ್ದು, ಬಂಧಿಸಲು ಕಾರ್ಯಾಚರಣೆ ನಡೆದಿದೆ.

ಪೋಕ್ಸೋ ಮತ್ತು ಅಟ್ರಾಸಿಟಿ ಕೇಸಿನಡಿ ಯುವಕನನ್ನು ಬಂಧಿಸಲಾಗಿದೆ ಎಂದು ನ್ಯಾಮತಿ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಚನ್ನಗಿರಿ ಡಿವೈಎಸ್ಪಿ ರುದ್ರಪ್ಪ ಉಜ್ಜನಕೊಪ್ಪ ತಿಳಿಸಿದರು.