ಜಿಲ್ಲೆ

ಕೆಲಸ ಸಿಗದೇ ಜೀವನದಲ್ಲಿ ಜಿಗುಪ್ಸೆ: ಆತುರದ ನಿರ್ಧಾರ ತೆಗೆದುಕೊಂಡ ಯುವತಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಕೆಲಸ ಸಿಗದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡ ಪದವೀಧರ ಯುವತಿ ವಿಶ್ವವಿಖ್ಯಾತ ಕೆ.ಆರ್.ಸಾಗರದ ಬೃಂದಾವನದ ದೋಣಿ ವಿಹಾರ ಕೇಂದ್ರದಲ್ಲಿ ನೀರಿಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಂಜನಗೂಡು ಮೂಲದ ಡಿ.ಪಿ.ಚೇತನಾಕುಮಾರಿ(40) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂಎ ಮತ್ತು ಬಿಇಡಿ ವ್ಯಾಸಂಗ ಮಾಡಿದ್ದ ಈಕೆ ಸಾಧನೆ ಮಾಡಲೆಂದು ಮೈಸೂರಿಗೆ ಬಂದು ನೆಲೆಸಿದ್ದರು. ಆದರೆ ಕೆಲಸ ಸಿಗದ ಕಾರಣ ಮನನೊಂದು ದುರಂತ ಮಾಡಿಕೊಂಡಿದ್ದಾರೆ. ಸಾಯುವ ಮುನ್ನ ಎರಡು ಪುಟದ ಡೆತ್‌ನೋಟ್ ಬರೆದಿದ್ದಾರೆ. ಬೃಂದಾವನದಲ್ಲಿನ ದೋಣಿ ವಿಹಾರದಲ್ಲಿ ಶವ ತೆಲುತ್ತಿರುವ ಬಗ್ಗೆ ಕೆಲಸಗಾರರು ಕೆಎಸ್‌ಐಎಸ್‌ಎಫ್ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕೆ.ಆರ್.ಸಾಗರ ಪೊಲೀಸರು ಆಗಮಿಸಿ ಶವವನ್ನು ಹೊರಗೆ ತೆಗೆಸಿದ್ದಾರೆ. ಈ ಸಂಬಂಧ ಕೆ.ಆರ್.ಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.